ADVERTISEMENT

ಹೆಚ್ಚುವರಿ ಹೂಡಿಕೆಗೆ ‘ಯುಪಿಎಸ್’ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 20:35 IST
Last Updated 8 ನವೆಂಬರ್ 2018, 20:35 IST

ಬೆಂಗಳೂರು: ವೈಮಾನಿಕ ಸರಕು ಸಾಗಣೆಯ ಜಾಗತಿಕ ಸೇವಾ ಸಂಸ್ಥೆ ‘ಯುಪಿಎಸ್‌’, ಭಾರತದಲ್ಲಿ ತನ್ನ ಸೇವೆಗಳನ್ನು ತ್ವರಿತಗತಿಯಲ್ಲಿ ವಿಸ್ತರಿಸಲು ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚಿಸಲು ನಿರ್ಧರಿಸಿದೆ.

ವಹಿವಾಟನ್ನು ಹೆಚ್ಚು ದಕ್ಷ ರೀತಿಯಲ್ಲಿ ನಿರ್ವಹಿಸಲು ನೆರವಾಗುವ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಹೆಚ್ಚುವರಿ ಹೂಡಿಕೆಯ ನೆರವಿನಿಂದ ಎಕ್ಸ್‌ಪ್ರೆಸ್ ಸರ್ವೀಸಸ್ ಯೂನಿಟ್ ಆರಂಭಿಸಲು ನಿರ್ಧರಿಸಿದೆ. ಹೈದರಾಬಾದ್ ಮತ್ತು ಅಹ್ಮದಾಬಾದ್‍ನಲ್ಲಿ ಹೊಸ ಘಟಕಗಳನ್ನು ಆರಂಭಿಸಲಿದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT