ADVERTISEMENT

ವಹಿವಾಟು ವಿಸ್ತರಣೆಗೆ ಆದೀಶ್ವರ ಕ್ರಮ

ಲಾಟರಿ ಮೂಲಕ ಬಹುಮಾನ ವಿಜೇತರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 20:00 IST
Last Updated 17 ಡಿಸೆಂಬರ್ 2018, 20:00 IST
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅದೃಷ್ಟ ಶಾಲಿಗಳನ್ನು ಆಯ್ಕೆ ಮಾಡಲಾಯಿತು
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅದೃಷ್ಟ ಶಾಲಿಗಳನ್ನು ಆಯ್ಕೆ ಮಾಡಲಾಯಿತು   

ಬೆಂಗಳೂರು: ಗೃಹೋಪಯೋಗಿ ಮತ್ತು ಎಲೆಕ್ಟ್ರಾನಿಕ್ಸ್‌ ಸರಕುಗಳ ಮಾರಾಟ ಸಂಸ್ಥೆ ಆದೀಶ್ವರ್ ಎಲೆಕ್ಟ್ರೊ ವರ್ಲ್ಡ್ ಸಂಸ್ಥೆಯು 2020ರ ವೇಳೆಗೆ ತನ್ನ ಮಾರಾಟ ಮಳಿಗೆಗಳ ಸಂಖ್ಯೆಯನ್ನು 100ಕ್ಕೆ ಏರಿಸಲು ಉದ್ದೇಶಿಸಿದೆ.

‘ಗ್ರಾಹಕರ ಮನ ಗೆಲ್ಲಲು ಮುಂದಿನ ಹಣಕಾಸು ವರ್ಷದಲ್ಲಿ ಇನ್ನಷ್ಟು ಆಕರ್ಷಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಸದ್ಯಕ್ಕೆ ಬೆಂಗಳೂರಿನಲ್ಲಿ 34 ಮಳಿಗೆಗಳು ಸೇರಿದಂತೆ ಕರ್ನಾಟಕ ಮತ್ತು ತೆಲಂಗಾಣದಲ್ಲಿ 66 ಮಳಿಗೆಗಳು ಇವೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಾರಸ್‌ ಜೈನ್‌ ಹೇಳಿದ್ದಾರೆ.

ಹಬ್ಬಗಳ ಸಂದರ್ಭದಲ್ಲಿ ನಡೆಸಿದ್ದ ವಿಶೇಷ ಮಾರಾಟದ ಅದೃಷ್ಟಶಾಲಿ ವಿಜೇತರನ್ನು ಡ್ರಾ ಮೂಲಕ ಆಯ್ಕೆ ಮಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ADVERTISEMENT

ಬಂಪರ್‌ ಬಹುಮಾನ ರೂಪದಲ್ಲಿ 1 ಕೆ.ಜಿ ಚಿನ್ನ (ಕೂಪನ್‌ ಸಂಖ್ಯೆ 854684), ಹುಂಡೈ ಕ್ರಿಟಾ ಕಾರ್‌ (034514), 10 ಮಂದಿಗೆ ರೆನೊ ಕ್ವಿಡ್‌ ಕಾರ್‌, 100 ಮಂದಿಗೆ ಎಲ್‌ಇಡಿ ಟಿವಿ, ಒಂದು ಸಾವಿರ ಗ್ರಾಹಕರು ಮಿಕ್ಸರ್‌ ಗ್ರೈಂಡರ್‌ ಮತ್ತು 10 ಸಾವಿರ ಗ್ರಾಹಕರು ₹ 1 ಸಾವಿರ ಬೆಲೆಯ ಗಿಫ್ಟ್‌ ಕಾರ್ಡ್‌ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.