ADVERTISEMENT

ಇಂಟರ್‍ಸಿಟಿ ಸ್ಮಾರ್ಟ್‌ ಬಸ್’ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 19:31 IST
Last Updated 16 ಜೂನ್ 2019, 19:31 IST

ಬೆಂಗಳೂರು: ಇಂಟರ್‍ಸಿಟಿ ಸಾರಿಗೆ ಜಾಲ ಸಂಸ್ಥೆ ರೈಲ್‍ಯಾತ್ರಿ, ಬೆಂಗಳೂರು-ಚೆನ್ನೈ ನಡುವೆ ಇಂಟರ್‍ಸಿಟಿ ಸ್ಮಾರ್ಟ್‍ಬಸ್ ಸೇವೆ ಆರಂಭಿಸಿದೆ.

ರೈಲ್‍ಯಾತ್ರಿಯ ಇಂಟರ್‍ಸಿಟಿ ಸ್ಮಾರ್ಟ್‌ ಬಸ್‍ಗಳು ರೈಲಿನ ಮಾದರಿಯಲ್ಲಿ ಆರಾಮದಾಯಕ ಬರ್ತ್‌, ಉಚಿತ ವೈ-ಫೈ, ಮನರಂಜನೆ, ಮಿನರಲ್ ವಾಟರ್ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳನ್ನು ಒಳಗೊಂಡಿರುತ್ತವೆ. ಇದು ರೈಲುಗಳಿಗೆ ಪರ್ಯಾಯವಾಗಿರಲಿದೆ. ‘ಫ್ಲೆಕ್ಸಿ ಟಿಕೆಟ್‌’ ಸೌಲಭ್ಯದಡಿ, ಪ್ರಯಾಣಿಕರು ಬಸ್ ಹೊರಡುವ ಒಂದು ಗಂಟೆ ಮೊದಲು ಕಡೆಯ ಕ್ಷಣದ ಬದಲಾವಣೆಯ ಸೌಲಭ್ಯ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಸಿಇಒ ಮನೀಶ್‌ ರಾಥಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT