ADVERTISEMENT

ಎಜಿಆರ್‌ ಬಾಕಿ: ಕಂಪನಿಗಳಿಗೆ ನ್ಯಾಯಾಂಗ ನಿಂದನೆಯ ಎಚ್ಚರಿಕೆ

ಸುಪ್ರೀಂನಿಂದ ಕೇಂದ್ರ, ಮೊಬೈಲ್‌ ಕಂಪನಿಗಳ ತರಾಟೆ

ಪಿಟಿಐ
Published 18 ಮಾರ್ಚ್ 2020, 21:08 IST
Last Updated 18 ಮಾರ್ಚ್ 2020, 21:08 IST
   

ನವದೆಹಲಿ: ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ಬಾಕಿ ಮೊತ್ತಕ್ಕೆ ಸಂಬಂಧಿಸಿದಂತೆ ತನ್ನ ತೀರ್ಪನ್ನು ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಾದೀತು ಎಂದುಸುಪ್ರೀಂಕೋರ್ಟ್‌ ಬುಧವಾರ ಕೇಂದ್ರ ಸರ್ಕಾರ ಮತ್ತು ಮೊಬೈಲ್‌ ಕಂಪನಿಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಿದೆ.

‘ಎಜಿಆರ್‌’ ಬಾಕಿ ಪಾವತಿಯ ಕುರಿತಾಗಿ ಮೊಬೈಲ್‌ ಕಂಪನಿಗಳು ಒಟ್ಟಾರೆ ₹ 1.47 ಲಕ್ಷ ಕೋಟಿ ಬಾಕಿ ಪಾವತಿಸುವಂತೆ ಸುಪ್ರೀಂಕೋರ್ಟ್‌ ಅಕ್ಟೋಬರ್‌ 24ರ ತೀರ್ಪಿನಲ್ಲಿ ಆದೇಶಿಸಿತ್ತು. ಆದರೆ, ಬಾಕಿ ಮೊತ್ತದ ಬಗ್ಗೆ ಕಂಪನಿಗಳೇ ಖುದ್ದು ಲೆಕ್ಕಾಚಾರ ಹಾಕಿರುವ ಮಾಹಿತಿಯನ್ನು ಸರ್ಕಾರಕ್ಕೆ ನೀಡಿವೆ. ಈ ಕುರಿತು ಸುಪ್ರೀಂಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕಂಪನಿಗಳಿಗೆ ಖುದ್ದು ಲೆಕ್ಕಾಚಾರ ಹಾಕಲು ಅನುಮತಿ ನೀಡಿರುವ ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳಿಗೆ ಸಮನ್ಸ್ ನೀಡಲಾಗುವುದು. ಕೋರ್ಟ್‌ ತೀರ್ಪುಗೆ ವಿರುದ್ಧವಾಗಿ ಕಂಪನಿಗಳು ತಮ್ಮ ಲೆಕ್ಕಾಚಾರವನ್ನು ಮುಂದಿಡುವ ಮೂಲಕ ಗಂಭೀರವಾದ ವಂಚನೆ ಎಸಗಿವೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.