ಬೆಂಗಳೂರು: ಅಗ್ಗದ ವಿಮಾನ ಯಾನ ಸಂಸ್ಥೆ ಏರ್ ಏಷ್ಯಾ, ಕ್ವಾಲಾಲಂಪುರ, ಬ್ಯಾಂಕಾಕ್ಗೆ ಕಡಿಮೆ ದರದಲ್ಲಿ ಪ್ರಯಾಣಿಸುವ ಆಕರ್ಷಕ ದರ ಕೊಡುಗೆ ಪ್ರಕಟಿಸಿದೆ.
ಒಬ್ಬರಿಗೆ ₹ 5,399 ಪಾವತಿಸಿ ಈ ತಾಣಗಳಿಗೆ ಪ್ರಯಾಣಿಸಬಹುದಾಗಿದೆ. ಟಿಕೆಟ್ಗಳ ಮಾರಾಟ ಆರಂಭವಾಗಿದೆ. ಪ್ರಯಾಣದ ಅವಧಿಯು ಮೇ ತಿಂಗಳಿನಿಂದ ಈ ವರ್ಷದ ಅಕ್ಟೋಬರ್ 31ಕ್ಕೆ ಕೊನೆಗೊಳ್ಳಲಿದೆ. ಥಾಯ್ಲೆಂಡ್ ಸರ್ಕಾರವು ಅಕ್ಟೊಬರ್ 31ರವರೆಗೆ ವೀಸಾ ಪಡೆಯುವುದಕ್ಕೆ ವಿನಾಯಿತಿ ನೀಡಿರುವ ಪ್ರಯೋಜನ ಪಡೆದುಕೊಳ್ಳಲು ಈ ಕೊಡುಗೆಯ ಲಾಭ ಪಡೆಯಬಹುದು ಎಂದು ಸಂಸ್ಥೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.