ADVERTISEMENT

40 ವಿಮಾನಗಳನ್ನು ನವೀಕರಿಸಲಿರುವ ಏರ್ ಇಂಡಿಯಾ

ಪಿಟಿಐ
Published 8 ಡಿಸೆಂಬರ್ 2022, 14:00 IST
Last Updated 8 ಡಿಸೆಂಬರ್ 2022, 14:00 IST
   

ಮುಂಬೈ: ಅಗಲ ದೇಹದ ಒಟ್ಟು 40 ವಿಮಾನಗಳನ್ನು ನವೀಕರಿಸುವ ಉದ್ದೇಶ ಇದೆ ಎಂದು ಏರ್ ಇಂಡಿಯಾ ಹೇಳಿದೆ. ಈ ಉದ್ದೇಶಕ್ಕಾಗಿ ಕಂಪನಿಯು ಒಟ್ಟು ₹ 3,295 ಕೋಟಿ ವೆಚ್ಚ ಮಾಡಲಿದೆ.

ನವೀಕರಣದ ಭಾಗವಾಗಿ ವಿಮಾನದ ಒಳಾಂಗಣವನ್ನು ಸಂಪೂರ್ಣವಾಗಿ ಬದಲಾಯಿಸಲಾಗುತ್ತದೆ, ಹೊಸ ತಲೆಮಾರಿನ ಆಸನಗಳನ್ನು ಅಳವಡಿಸಲಾಗುತ್ತದೆ, ಎಲ್ಲ ವರ್ಗಗಳ ಆಸನಗಳಲ್ಲಿ ಅತ್ಯುತ್ತಮ ಮನರಂಜನಾ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಏರ್ ಇಂಡಿಯಾ ಪ್ರಕಟಣೆ ತಿಳಿಸಿದೆ.

ನವೀಕರಣದ ಕೆಲಸಗಳಿಗಾಗಿ ಲಂಡನ್ ಮೂಲದ ಜೆಪಿಎ ಡಿಸೈನ್ಸ್ ಮತ್ತು ಟ್ರೆಂಡ್‌ವರ್ಕ್ಸ್‌ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.