ನವದೆಹಲಿ: 2019–20ರಲ್ಲಿ ಏರ್ ಇಂಡಿಯಾ ಸಂಸ್ಥೆಯ ಮಾರಾಟದಿಂದ ₹ 7 ಸಾವಿರ ಕೋಟಿ ಸಂಗ್ರಹಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2019–20ರ ದ್ವಿತೀಯಾರ್ಧದಲ್ಲಿ ಷೇರು ವಿಕ್ರಯ ಪ್ರಕ್ರಿಯೆ ಆರಂಭಿಸಲಿದೆ. ಈ ಅವಧಿಯೊಳಗೆ ಕೆಲವು ಅಂಗಸಂಸ್ಥೆಗಳು ಮತ್ತು ಆಸ್ತಿಗಳನ್ನು ಮಾರಾಟ ಮಾಡಲೂ ಕ್ರಮ ಕೈಗೊಳ್ಳಲಿದೆ.2018 ನವೆಂಬರ್ ಅಂತ್ಯಕ್ಕೆ ಸಂಸ್ಥೆಯ ಸಾಲದ ಮೊತ್ತ ₹ 55 ಸಾವಿರ ಕೋಟಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.