ADVERTISEMENT

ಏರ್‌ ಇಂಡಿಯಾದಿಂದ 220 ವಿಮಾನ ಖರೀದಿ?

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 21:52 IST
Last Updated 27 ಜನವರಿ 2023, 21:52 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಏರ್‌ ಇಂಡಿಯಾ ಕಂಪನಿಯು ಖರೀದಿಸಲು ಉದ್ದೇಶಿಸಿರುವ 495 ವಿಮಾನಗಳಲ್ಲಿ ಅರ್ಧದಷ್ಟು ಸಂಖ್ಯೆಯ ವಿಮಾನಗಳಿಗಾಗಿ ಬೋಯಿಂಗ್‌ ಮತ್ತು ಜನರಲ್‌ ಎಲೆಕ್ಟ್ರಿಕ್‌, ಸಿಎಫ್‌ಎಂ ಇಂಟರ್‌ನ್ಯಾಷನಲ್‌ ಕಂಪನಿಗಳಿಗೆ ಕಾರ್ಯಾದೇಶ ನೀಡಿದೆ ಎಂದು ಮೂಲಗಳು ಹೇಳಿವೆ.

ಕಂಪನಿಯು ಸಣ್ಣ ದೇಹದ 190 ಬೋಯಿಂಗ್‌ 737 ಮ್ಯಾಕ್ಸ್‌, 20 ಬೋಯಿಂಗ್‌ 787 ಮತ್ತು 10 ಬೋಯಿಂಗ್‌ 777ಎಕ್ಸ್‌ ಖರೀದಿಗೆ ಕಾರ್ಯಾದೇಶ ನೀಡಿದೆ ಎಂದು ತಿಳಿಸಿವೆ.

ಎರಡನೇ ಹಂತದಲ್ಲಿ, 235 ಏರ್‌ಬಸ್‌ ಮತ್ತು ಅಗಲ ದೇಹದ 40 ಏರ್‌ಬಸ್‌ ಎ350 ವಿಮಾನಗಳನ್ನು ಕಂಪನಿ ಖರೀದಿಸಲಿದೆ ಎಂದು ಹೇಳಿವೆ.

ADVERTISEMENT

ಬೋಯಿಂಗ್‌, ಏರ್‌ಬಸ್‌, ಸಿಎಫ್‌ಎಫ್ ಕಂಪನಿಗಳು ಈ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿವೆ. ಈ ಕುರಿತು ಏರ್‌ ಇಂಡಿಯಾ ಕಂಪನಿಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆದರೆ, ಟಾಟಾ ಮಾಲೀಕತ್ವದಲ್ಲಿ ಕಂಪನಿಯು ಮೊದಲ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಈ ಕುರಿತು ಉದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ ಭವಿಷ್ಯದ ಬೆಳವಣಿಗೆಗೆ ಶಕ್ತಿ ತುಂಬಲು ಹೊಸ ವಿಮಾನಗಳನ್ನು ಖರೀದಿಸುವ ಕಾರ್ಯಾದೇಶವನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.