ADVERTISEMENT

ಏರ್‌ ಇಂಡಿಯಾ: 5,100 ನೇಮಕ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 22:01 IST
Last Updated 24 ಫೆಬ್ರುವರಿ 2023, 22:01 IST
   

ನವದೆಹಲಿ: ಏರ್ ಇಂಡಿಯಾ ಕಂಪನಿಯು ಈ ವರ್ಷದಲ್ಲಿ 4,200 ಸಿಬ್ಬಂದಿ ಮತ್ತು 900 ಪೈಲಟ್‌ಗಳನ್ನು ನೇಮಿಸಿಕೊಳ್ಳಲಿದೆ.

ಟಾಟಾ ಸಮೂಹದ ಒಡೆತನದಲ್ಲಿ ಇರುವ ಕಂಪನಿಯು ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದ್ದು, ಇದರ ಭಾಗವಾಗಿ ಈ ನೇಮಕ ಮಾಡಿಕೊಳ್ಳುತ್ತಿದೆ.

ಹೊಸ ವಿಮಾನಗಳನ್ನು ಖರೀದಿ ಮಾಡಿರುವುದು, ದೇಶಿ ಮತ್ತು ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನು ವಿಸ್ತರಣೆ ಮಾಡುತ್ತಿರುವುದರಿಂದಾಗಿ ಈ ನೇಮಕಾತಿಗೆ ಯೋಜನೆ ರೂಪಿಸಿರುವುದಾಗಿ ಕಂಪನಿಯು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

2022ರ ಮೇ ನಿಂದ 2023ರ ಫೆಬ್ರುವರಿ ಅವಧಿಯಲ್ಲಿ ಕಂಪನಿಯು 1,900 ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. ಇವರಲ್ಲಿ 1,100 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.