ADVERTISEMENT

ಆಸ್ತಿ ಹರಾಜಿಗೆ ಏರ್‌ ಇಂಡಿಯಾ ಕ್ರಮ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 18:27 IST
Last Updated 8 ಜನವರಿ 2020, 18:27 IST
ಏರ್‌ ಇಂಡಿಯಾ ಮಹಾರಾಜ್‌
ಏರ್‌ ಇಂಡಿಯಾ ಮಹಾರಾಜ್‌   

ಬೆಂಗಳೂರು: ಸಾಲದ ಸುಳಿಯಲ್ಲಿ ಸಿಲುಕಿರುವ ಸರ್ಕಾರಿ ಸ್ವಾಮ್ಯದ ನಾಗರಿಕ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ, ವಿವಿಧ ನಗರಗಳಲ್ಲಿನ ತನ್ನ ಕೆಲ ಸ್ಥಿರಾಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿದೆ.

12 ರಾಜ್ಯಗಳಲ್ಲಿನ ನಿವೇಶನ ಮತ್ತು ಫ್ಲ್ಯಾಟ್‌ಗಳ ಮಾರಾಟಕ್ಕೆ ಬಿಡ್‌ಗಳನ್ನು ಆಹ್ವಾನಿಸಿದೆ. ಇವುಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿನ (3) ಮತ್ತು ಮಂಗಳೂರಿನ (2) ಫ್ಲ್ಯಾಟ್ಸ್‌ಗಳು ಸೇರಿವೆ. ಈ ಆಸ್ತಿಗಳ ಹರಾಜು ಆನ್‌ಲೈನ್‌ನಲ್ಲಿ ನಡೆಯಲಿದೆ. ಸರ್ಕಾರಿ ಸ್ವಾಮ್ಯದ ಇ–ಕಾಮರ್ಸ್‌ ಕಂಪನಿ ಎಂಎಸ್‌ಟಿಸಿ ಮೂಲಕ ಈ ಹರಾಜು ಪ್ರಕ್ರಿಯೆ ನಡೆಯಲಿದೆ.

ಸಂಸ್ಥೆಯ ವಶದಲ್ಲಿ ಇರುವ ಆಸ್ತಿಗಳನ್ನು ಮಾರಾಟ ಮಾಡಿ ನಗದೀಕರಣಗೊಳಿಸಲು ಕೇಂದ್ರ ಸರ್ಕಾರ ಈ ಹಿಂದೆಯೇ ಅನುಮತಿ ನೀಡಿದೆ. ‘ಎಐ’ನಲ್ಲಿನ ತನ್ನ ಸಂಪೂರ್ಣ ಪಾಲು ಬಂಡವಾಳವನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ.

ADVERTISEMENT

ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿನ ಸಚಿವರ ತಂಡದ ಸಮಿತಿಯು, ‘ಎಐ’ ಖಾಸಗೀಕರಣ ನಿಟ್ಟಿನಲ್ಲಿ ಖರೀದಿ ಇಂಗಿತ ವ್ಯಕ್ತಪಡಿಸುವ ಮತ್ತು ಷೇರು ಖರೀದಿ ಒಪ್ಪಂದಗಳಿಗೆ ಅನುಮೋದನೆ ನೀಡಿದೆ. ಬಿಡ್‌ದಾರರಿಗೆ ಇವುಗಳನ್ನು ಶೀಘ್ರದಲ್ಲಿಯೇ ಸಲ್ಲಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.