ADVERTISEMENT

ಏರ್‌ಟೆಲ್ ಪಾವತಿ ಸೇವೆಗಳು ಅಬಾಧಿತ, ಗ್ರಾಹಕರ ಕ್ಷಮೆಯಾಚಿಸಿದ ಫೋನ್‌ಪೇ ಸಿಇಒ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 14:27 IST
Last Updated 6 ಮಾರ್ಚ್ 2020, 14:27 IST
ಯೆಸ್ ಬ್ಯಾಂಕ್
ಯೆಸ್ ಬ್ಯಾಂಕ್   

ಮುಂಬೈ: ಹಣಕಾಸು ಬಿಕ್ಕಟ್ಟಿಗೆ ಸಿಲುಕಿರುವ ಖಾಸಗಿ ವಲಯದ ಯೆಸ್ ಬ್ಯಾಂಕ್ ತಮ್ಮ ಗ್ರಾಹಕರಿಗೆಪ್ರತಿ ಖಾತೆಯಿಂದ ₹50 ಸಾವಿರದವರೆಗೆ ಮಾತ್ರ ಹಣ ಹಿಂದೆ ಪಡೆಯಲು ಗರಿಷ್ಠ ಮಿತಿ ವಿಧಿಸಿದೆ. ಅದೇ ವೇಳೆ ಏರ್‌ಟೆಲ್ ಪಾವತಿಸೇವೆ ಅಬಾಧಿತ ಎಂದು ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಪ್ರಕಟಣೆ ಹೊರಡಿಸಿದೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ)ನಲ್ಲಿ ಯೆಸ್ ಬ್ಯಾಂಕ್ ಏರ್‌ಟೆಲ್‌ನ ಸರ್ವೀಸ್ ಪ್ರೊವೈಡರ್ ಪಟ್ಟಿಯಲ್ಲಿತ್ತು. ಆದರೆ ಯೆಸ್ ಬ್ಯಾಂಕ್ ನಮ್ಮ ಸರ್ವೀಸ್ ಪ್ರೊವೈಡರ್ ಅಲ್ಲ ಎಂದು ಏರ್‌ಟೆಲ್ ಹೇಳಿದೆ. ಆದಾಗ್ಯೂ ತಮ್ಮ ಎಲ್ಲ ಸೇವೆಗಳು ಅಬಾಧಿತ ಎಂದು ಏರ್‌ಟೆಲ್ ಸಂಸ್ಥೆ ಟ್ವೀಟ್ ಮಾಡಿದೆ.

ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಯೆಸ್ ಬ್ಯಾಂಕ್‌ನ ಹಣಕಾಸು ಪರಿಸ್ಥಿತಿ ಮತ್ತು ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದು, ತಮ್ಮ ಗ್ರಾಹಕರಿಗೆ ತಡೆರಹಿತ ಸೇವೆ ನೀಡುವುದಾಗಿ ಭರವಸೆ ನೀಡಿದೆ.

ADVERTISEMENT

ಏತನ್ಮಧ್ಯೆ, ಫೋನ್ ಪೇ ಸೇವೆಯಲ್ಲಿ ತೊಂದರೆಯುಂಟಾಗಿದ್ದಕ್ಕೆ ಫೋನ್‌ಪೇ ಸಂಸ್ಥಾಪಕ ಮತ್ತು ಸಿಇಒ ಸಮೀರ್ ನಿಗಮ್ ಟ್ವಿಟರ್‌‌ನಲ್ಲಿ ಕ್ಷಮೆಯಾಚಿಸಿದ್ದಾರೆ.

ಕ್ರೆಡಿಟ್ ಕಾರ್ಡ್ ಪೇಮೆಂಟ್ ಸೇವೆ ಒದಗಿಸುವ ಕ್ರೆಡ್ ಸಂಸ್ಥೆಯ ಸಂಸ್ಥಾಪಕ ಕುನಾಲ್ ಶಾ, ತಮ್ಮ ಸೇವೆಯೂ ಅಬಾಧಿತ ಎಂದಿದ್ದಾರೆ. ಕ್ರೆಡ್ ಆ್ಯಪ್ ಆಕ್ಸಿಸ್ ಬ್ಯಾಂಕ್ ಯುಪಿಐನ್ನು ಬಳಸುತ್ತಿದೆ. ಯೆಸ್ ಬ್ಯಾಂಕ್ ಯುಪಿಐ ಅಲ್ಲ ಎಂದು ಶಾ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.