ADVERTISEMENT

ಭವಿಷ್ಯ ನಿಧಿ ಬಡ್ಡಿ ಕಡಿತಯತ್ನ: ’ಐಟಕ್‌‘ ವಿರೋಧ

ಪಿಟಿಐ
Published 26 ಜೂನ್ 2020, 16:30 IST
Last Updated 26 ಜೂನ್ 2020, 16:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿಯ (ಇಪಿಎಫ್‌) ಬಡ್ಡಿ ದರವನ್ನು 2019–20ನೇ ಸಾಲಿಗೆ ಶೇ 8.5ರಿಂದ ಕಡಿತಗೊಳಿಸುವ ಯಾವುದೇ ಪ್ರಯತ್ನವನ್ನು ತೀವ್ರವಾಗಿ ವಿರೋಧಿಸಲಾಗುವುದು ಎಂದು ಅಖಿಲ ಭಾರತ ಕಾರ್ಮಿಕ ಸಂಘಟನೆ ಕಾಂಗ್ರೆಸ್‌ (ಐಟಕ್‌) ತಿಳಿಸಿದೆ.

‘ಇಪಿಎಫ್‌ಒ’ದ ಹೂಡಿಕೆಗೆ ಕಡಿಮೆ ವರಮಾನ ಬಂದಿರುವುದರಿಂದ ಬಡ್ಡಿ ದರ ಕಡಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಆಗಿರುವ ಹಿನ್ನೆಲೆಯಲ್ಲಿ ’ಐಟಕ್‌’ ಈ ಪ್ರತಿಕ್ರಿಯೆ ನೀಡಿದೆ.

ಕೋವಿಡ್‌ ಪಿಡುಗಿನ ಕಾರಣಕ್ಕೆ ಕಾರ್ಮಿಕರು ಮತ್ತು ಉದ್ಯೋಗಿಗಳು ಈಗಾಗಲೇ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯೋಗ ನಷ್ಟ ಮತ್ತು ವೇತನ ಕಡಿತ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಿಎಫ್‌ ಬಡ್ಡಿ ಕಡಿತಗೊಳಿಸುವ ಚಿಂತನೆ ಸರಿಯಲ್ಲ ಎಂದು ಹೇಳಿದೆ.

ADVERTISEMENT

2018–19ನೇ ಸಾಲಿನ ಶೇ 8.65 ಬಡ್ಡಿಗೆ ಹೋಲಿಸಿದರೆ 2019–20ನೇ ಸಾಲಿಗೆ ಈಗಾಗಲೇ ಬಡ್ಡಿ ದರವನ್ನು ಶೇ 8.50ಕ್ಕೆ ಇಳಿಸಲಾಗಿದೆ. ಹಣಕಾಸು ಸಚಿವಾಲಯವು ಈ ಬಡ್ಡಿ ದರಕ್ಕೆ ಇನ್ನೂ ತನ್ನ ಅನುಮೋದನೆ ನೀಡಬೇಕಾಗಿದೆ. ಇಪಿಎಫ್‌ನ ಉನ್ನತ ಮಂಡಳಿಯಾಗಿರುವ ಕೇಂದ್ರೀಯ ಟ್ರಸ್ಟ್‌ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಡ್ಡಿ ದರ ಕಡಿತಗೊಳಿಸುವ ಚಿಂತನೆಯು ಶಾಸನದ್ಧ ಟ್ರಸ್ಟ್‌ಗೆ ಅಗೌರವ ಸೂಚಿಸಿದಂತೆ ಎಂದು ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.