ADVERTISEMENT

ಆಕಾಸಾ ಏರ್‌ ಸೇವೆ ಇದೇ ತಿಂಗಳಲ್ಲಿ

ಪಿಟಿಐ
Published 7 ಜುಲೈ 2022, 16:22 IST
Last Updated 7 ಜುಲೈ 2022, 16:22 IST

ಮುಂಬೈ: ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ತನಗೆ ವಾಣಿಜ್ಯ ಉದ್ದೇಶಕ್ಕೆ ವಿಮಾನ ಬಳಸಲು ಪ್ರಮಾಣಪತ್ರ ನೀಡಿದೆ ಎಂದು ಆಕಾಸಾ ಏರ್ ಗುರುವಾರ ಹೇಳಿದೆ. ಕಂಪನಿಯು ಈ ತಿಂಗಳಿನಲ್ಲೇ ವಿಮಾನಯಾನ ಸೇವೆ ಆರಂಭಿಸಲಿದೆ.

ಹೂಡಿಕೆದಾರ ರಾಕೇಶ್‌ ಜುಂಝನ್‌ವಾಲಾ ಅವರು ಕೂಡ ಪಾಲುದಾರ ಆಗಿರುವ ಈ ಕಂಪನಿಯು ಬೋಯಿಂಗ್‌ 737 ವಿಮಾನವನ್ನು ಪಡೆದುಕೊಂಡಿದೆ. ಕಂಪನಿಯು ಎರಡು ವಿಮಾನಗಳೊಂದಿಗೆ ತನ್ನ ಸೇವೆ ಆರಂಭಿಸಲಿದೆ. ಪ್ರಸಕ್ತ ಹಣಕಾಸು ವರ್ಷದ ಕೊನೆಯ ಹೊತ್ತಿಗೆ 18 ವಿಮಾನಗಳನ್ನು ಕಂಪನಿ ಹೊಂದಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT