ADVERTISEMENT

ಬೆಂಗಳೂರು–ಪುಣೆ ಮಾರ್ಗದಲ್ಲಿ ನವೆಂಬರ್ 23ರಿಂದ ಆಕಾಸಾ ಏರ್‌ ಸೇವೆ

ಪಿಟಿಐ
Published 2 ನವೆಂಬರ್ 2022, 16:00 IST
Last Updated 2 ನವೆಂಬರ್ 2022, 16:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಆಕಾಸಾ ಏರ್‌ ವಿಮಾನಯಾನ ಕಂಪನಿಯು ಇದೇ ತಿಂಗಳ 23ರಿಂದ ಬೆಂಗಳೂರು–ಪುಣೆ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸುವುದಾಗಿ ಬುಧವಾರ ತಿಳಿಸಿದೆ.

ಆಗಸ್ಟ್‌ 7ರಂದು ಕಾರ್ಯಾಚರಣೆ ಆರಂಭಿಸಿದ ಕಂಪನಿಯ ನೆಟ್‌ವರ್ಕ್ ವ್ಯಾಪ್ತಿಗೆ ಒಂಬತ್ತನೇ ನಗರ ಸೇರ್ಪಡೆ ಆಗಿದೆ.

ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಬೆಂಗಳೂರು ಮತ್ತು ಮುಂಬೈ ಮಾರ್ಗದಲ್ಲಿ ವಿಮಾನ ಸೇವೆಯನ್ನು ಹೆಚ್ಚಿಸಲಾಗುವುದು. ನಿತ್ಯವೂ ಈ ಮಾರ್ಗದಲ್ಲಿ ಏಳು ಬಾರಿ ವಿಮಾನ ಸಂಚರಿಸಲಿದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ಬೆಂಗಳೂರಿನಿಂದ ಮುಂಬೈ, ಅಹಮದಾಬಾದ್‌, ದೆಹಲಿ, ಚೆನ್ನೈ, ಕೊಚ್ಚಿ, ಗುವಾಹತಿ ಮತ್ತು ಪುಣೆ ನಗರಗಳ ನಡುವೆ ನಿತ್ಯವೂ 20 ವಿಮಾನಗಳು ಸೇವೆ ನೀಡಲಿವೆ.

ಪ್ರಮುಖ ಐ.ಟಿ. ಕೇಂದ್ರಗಳಾದ ಪುಣೆ ಮತ್ತು ಬೆಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವುದರಿಂದ ಎರಡೂ ಮಾರ್ಗಗಳಲ್ಲಿ ಕಡಿಮೆ ಬೆಲೆಗೆ ಹೆಚ್ಚುವರಿ ಸಂಪರ್ಕಗಳನ್ನು ನೀಡಲಾಗುವುದು ಎಂದು ಕಂಪನಿಯ ಸಹ ಸ್ಥಾಪಕ ಪ್ರವೀಣ್‌ ಅಯ್ಯರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.