ADVERTISEMENT

ಐಡಿಎಫ್‌ಸಿ ಫಸ್ಟ್‌: ಮರಳಿದ ವಂಚನೆ ಮೊತ್ತ

ಪಿಟಿಐ
Published 24 ಫೆಬ್ರುವರಿ 2026, 16:03 IST
Last Updated 24 ಫೆಬ್ರುವರಿ 2026, 16:03 IST
   

ಚಂಡೀಗಢ: ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ನಲ್ಲಿ ನಡೆದ ವಂಚನೆ ಪ್ರಕರಣದಲ್ಲಿ ತನಗೆ ಬರಬೇಕಿದ್ದ ಸರಿಸುಮಾರು ₹556 ಕೋಟಿ ವಾಪಸ್ಸಾಗಿದೆ ಎಂದು ಹರಿಯಾಣ ಮುಖ್ಯಮಂತ್ರಿ ನಾಯಬ್‌ ಸಿಂಗ್ ಸೈನಿ ತಿಳಿಸಿದ್ದಾರೆ.

‘₹22 ಕೋಟಿ ಬಡ್ಡಿ ಸೇರಿ ಸರಿಸುಮಾರು ₹556 ಕೋಟಿ ಮೊತ್ತವು 24 ಗಂಟೆಗಳಲ್ಲಿ ಮರಳಿ ಬಂದಿದೆ’ ಎಂದು ಸೈನಿ ಅವರು ವಿಧಾನಸಭೆಗೆ ತಿಳಿಸಿದ್ದಾರೆ.

ಹರಿಯಾಣ ಸರ್ಕಾರಕ್ಕೆ ಸಂಬಂಧಿಸಿದ ಖಾತೆಗಳಲ್ಲಿ ತನ್ನ ಸಿಬ್ಬಂದಿ ಹಾಗೂ ಇತರರಿಂದ ₹590 ಕೋಟಿ ಮೊತ್ತದ ವಂಚನೆ ನಡೆದಿದೆ ಎಂದು ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಭಾನುವಾರ ತಿಳಿಸಿತ್ತು.

ADVERTISEMENT

ವಂಚನೆಯಲ್ಲಿ ಯಾರೇ ಭಾಗಿಯಾಗಿರಲಿ, ಅವರು ಬ್ಯಾಂಕ್‌ ನೌಕರರಾಗಿರಲಿ, ಖಾಸಗಿ ವ್ಯಕ್ತಿಗಳಾಗಿರಲಿ ಅಥವಾ ಸರ್ಕಾರಿ ನೌಕರರಾಗಿರಲಿ ಅವರನ್ನು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.