
ಬೆಂಗಳೂರು: ಸ್ಟೀಲ್ ಉತ್ಪಾದನೆಯಲ್ಲಿ ನಾಲ್ಕು ರೇಟಿಂಗ್ ಪಾಯಿಂಟ್ ಪಡೆಯುವ ಮೂಲಕ ಪರಿಸರಸ್ನೇಹಿ ಸ್ಟೀಲ್ ಉತ್ಪಾದಿಸುತ್ತಿರುವ ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ (ಎಎಂ/ಎನ್‌ಎಸ್ ಇಂಡಿಯಾ) ಕೇಂದ್ರ ಉಕ್ಕಿನ ಸಚಿವಾಲಯದಿಂದ ಹೊಸ ಗ್ರೀನ್ ಸ್ಟೀಲ್ ಟ್ಯಾಕ್ಸಾನಮಿ ಅಡಿಯಲ್ಲಿ 'ಗ್ರೀನ್ ಸ್ಟೀಲ್' ಪ್ರಮಾಣೀಕರಣ ಪಡೆದುಕೊಂಡಿದ್ದು, ದೇಶದ ಮೊದಲ ಉಕ್ಕು ಉತ್ಪಾದಕ ಕಂಪನಿಯಾಗಿದೆ.
ಎಎಂ/ಎನ್‌ಎಸ್ ಇಂಡಿಯಾದ ಹಾಟ್ ರೋಲ್ಡ್ (ಎಚ್‌ಆರ್) ಸುರುಳಿ ಮತ್ತು ಹಾಳೆ ತಯಾರಿಕೆಯಲ್ಲಿ ನಾಲ್ಕು-ಸ್ಟಾರ್ ರೇಟಿಂಗ್ ಹಾಗೂ ಕೋಲ್ಡ್ ರೋಲ್ಡ್ (ಸಿಆರ್) ಸುರುಳಿ ಮತ್ತು ಹಾಳೆಯಲ್ಲಿ ಮೂರು-ಸ್ಟಾರ್ ರೇಟಿಂಗ್ ಸಾಧಿಸಿದೆ.
ಈ ಕುರಿತು ಮಾತನಾಡಿರುವ ಎಎಂ/ಎನ್‌ಎಸ್ ಇಂಡಿಯಾದ ಸಿಇಒ ದಿಲೀಪ್ ಉಮ್ಮೆನ್, ಉಕ್ಕು ಉತ್ಪಾದನೆ ಮಾಡುವ ಜೊತೆಗೆ, ಉತ್ಪಾದನೆಯ ಕ್ರಮವೂ ಪರಿಸರಕ್ಕೆ ಪೂರಕವಾಗಿರಬೇಕು. ಉಕ್ಕು ಉತ್ಪಾದನೆ ಹೆಸರಲ್ಲಿ ಸಾಕಷ್ಟು ಹೊಗೆ ಉಗುಳುವುದು, ಕಲುಷಿತ ನೀರನ್ನು ಹರಿಬಿಡುವುದರಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ. ನಮ್ಮ ಕಂಪನಿಯಲ್ಲಿ ಉಕ್ಕು ತಯಾರಿಸುವಾಗ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಇದರಿಂದ ಪರಿಸರಕ್ಕೆ ಹಾನಿಯಾಗುವುದು ತೀರ ಕಡಿಮೆ. ಅದಕ್ಕಾಗಿಯೇ ನಾಲ್ಕು ರೇಟಿಂಗ್ ಪಡೆದುಕೊಂಡಿದ್ದೇವೆ. ದೇಶದ ಬೇರಾವ ಕಂಪನಿಯೂ ನಾಲ್ಕು ರೇಟಿಂಗ್ ಪಡೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.