ADVERTISEMENT

ಆ್ಯಪಲ್‌ ಮಾರುಕಟ್ಟೆ ಮೌಲ್ಯ ₹150 ಲಕ್ಷ ಕೋಟಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 11:23 IST
Last Updated 20 ಆಗಸ್ಟ್ 2020, 11:23 IST
ಆ್ಯಪಲ್
ಆ್ಯಪಲ್   

ಬರ್ಕ್‌ಲೇ: ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ₹ 150 ಲಕ್ಷ ಕೋಟಿ ಗಡಿ ತಲುಪಿದ ಅಮೆರಿಕದ ಮೊದಲ ಕಂಪನಿ ಎನ್ನುವ ಹೆಗ್ಗಳಿಕೆಗೆ ಆ್ಯಪಲ್‌ ಪಾತ್ರವಾಗಿದೆ.

ಬುಧವಾರದ ವಹಿವಾಟಿನಲ್ಲಿ ಕಂಪನಿ ಷೇರು ಬೆಲೆ ₹ 35,082.75ನ್ನು ದಾಟಿದ ಬಳಿಕ ಈ ಮಹತ್ವದ ಮೈಲುಗಲ್ಲು ಸಾಧಿಸಿದೆ.

ಕಂಪನಿಯು ₹ 100 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಗಡಿ ತಲುಪಿದೆ ಎರಡು ವರ್ಷಗಳ ಬಳಿಕ ಈ ಸಾಧನೆ ಮಾಡಿದೆ. ಕೋವಿಡ್‌–19 ಪಿಡುಗು ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಉಂಟುಮಾಡುತ್ತಿರುವ ಈ ಸಂದರ್ಭದಲ್ಲಿಯೇತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿ ಈ ಸಾಧನೆ ಮಾಡಿದೆ. ಈ ವರ್ಷದಲ್ಲಿ ಇದುವರೆಗೆ ಆ್ಯಪಲ್‌ ಕಂಪನಿ ಷೇರು ಶೇ 60ರಷ್ಟು ಏರಿಕೆ ಕಂಡುಕೊಂಡಿದೆ.

ADVERTISEMENT

ಲಾಕ್‌ಡೌನ್‌ ಅವಧಿಯಲ್ಲಿ ತಂತ್ರಜ್ಞಾನ ಕಂಪನಿಗಳ ಬೇಡಿಕೆ ಹೆಚ್ಚಾಗಿದೆ. ಮನೆಯಲ್ಲಿ ಇದ್ದುಕೊಂಡೇ ಕೆಲಸ ಮಾಡಲು, ತರಗತಿಗಳನ್ನು ತೆಗೆದುಕೊಳ್ಳಲು, ಖರೀದಿ ನಡೆಸಲು ಹಾಗೂ ಮನೆಯಲ್ಲಿ ಮನರಂಜನೆ ನೀಡಲು ಆ್ಯಪಲ್‌, ಮೈಕ್ರೊಸಾಫ್ಟ್‌, ಗೂಗಲ್‌, ಅಮೆಜಾನ್‌, ಫೇಸ್‌ಬುಕ್‌ ಮತ್ತು ನೆಟ್‌ಫ್ಲಿಕ್‌ನಂತಹ ತಂತ್ರಜ್ಞಾನ ಕಂಪನಿಗಳು ನೆರವಾಗುತ್ತಿವೆ. ಈ ಕಾರಣಗಳಿಂದಾಗಿಯೇ ಹೂಡಿಕೆದಾರು ಇಂತಹ ಕಂಪನಿಗಳ ಷೇರುಗಳನ್ನು ಖರೀದಿಸುವಂತಾಗಿದೆ.

ಸೌದಿ ಆರಾಮ್ಕೊ ಕಂಪನಿಯು 2019ರ ಡಿಸೆಂಬರ್‌ನಲ್ಲಿಯೇ ₹ 150 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯದ ಗಡಿ ತಲುಪಿತ್ತು. ಸದ್ಯ ಅದರ ಮಾರುಕಟ್ಟೆ ಮೌಲ್ಯ ₹ 135 ಲಕ್ಷ ಕೋಟಿಗಳಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.