ADVERTISEMENT

ಹೆಚ್ಚುವರಿ ಸಾಲ ಪಡೆಯಲು ಬ್ಯಾಂಕ್‌ಗಳನ್ನು ಸಂಪರ್ಕಿಸಿ: ಕೇಂದ್ರ ಸಲಹೆ

ಪಿಟಿಐ
Published 8 ನವೆಂಬರ್ 2019, 19:41 IST
Last Updated 8 ನವೆಂಬರ್ 2019, 19:41 IST
   

ನವದೆಹಲಿ: ಗೃಹ ಸಾಲಗಾರರು ಹೆಚ್ಚುವರಿ ಸಾಲ ಪಡೆಯಲು ಬ್ಯಾಂಕ್‌ಗಳನ್ನು ಸಂಪರ್ಕಿಸಬೇಕು ಎಂದು ಕೇಂದ್ರ ಸರ್ಕಾರ ಸಲಹೆ ನೀಡಿದೆ.

ಸ್ಥಗಿತಗೊಂಡಿರುವ ಗೃಹ ನಿರ್ಮಾಣ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ₹ 25ಸಾವಿರ ಕೋಟಿಗಳ ನಿಧಿ ಸ್ಥಾಪಿಸಿದೆ. ಹೀಗಾಗಿ ಗೃಹ ಸಾಲಕ್ಕೆ ಸಲ್ಲಿಸಿದ ಅರ್ಜಿಗಳನ್ನು ಹೊಸದಾಗಿ ಪರಿಗಣಿಸಲು ಅಥವಾ ಸಾಲದ ಮೊತ್ತ ಹೆಚ್ಚಿಸಲು ಗೃಹಸಾಲಗಾರರು ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್‌ಗಳಲ್ಲಿ ವಿಚಾರಣೆ ಹಂತದಲ್ಲಿ ಇರುವ ಗೃಹ ನಿರ್ಮಾಣ ಯೋಜನೆಗಳಿಗೆ ಈ ನಿಧಿಯ ಹಣ ಬಳಸುವಂತಿಲ್ಲ ಎಂದು ತಿಳಿಸಿದೆ. ಹಣಕಾಸು ನೆರವು ದೊರೆಯದೆ ಸ್ಥಗಿತಗೊಂಡಿರುವ ಕೈಗೆಟುಕುವ ದರ ಮತ್ತು ಮಧ್ಯಮ ಆದಾಯದವರಿಗಾಗಿ ಇರುವ ಗೃಹ ನಿರ್ಮಾಣ ಚಟುವಟಿಕೆಗಳಿಗೆ ಆದ್ಯತೆ ನೀಡಲು ಈ ನಿಧಿ ಸ್ಥಾಪಿಸಲಾಗಿದೆ. ಪೂರ್ಣಗೊಳ್ಳಲು ಕೊನೆಯ ಹಂತದಲ್ಲಿ ಇರುವಯೋಜನೆಗಳಿಗೆ ಹಣಕಾಸು ನೆರವುಕಲ್ಪಿಸಲು ಹೆಚ್ಚಿನ ಆದ್ಯತೆ ನೀಡುವುದು ಸರ್ಕಾರದ ಉದ್ದೇಶವಾಗಿದೆ.

ADVERTISEMENT

ನಿಧಿ ಸಾಲದು: ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವ 1,500 ವಸತಿ ಯೋಜನೆಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲು ಈ ನಿಧಿಯು ಸಾಕಾಗುವುದಿಲ್ಲ ಎಂದು ಕ್ರೆಡಿಟ್‌ ರೇಟಿಂಗ್‌ ಸಂಸ್ಥೆ ‘ಐಸಿಆರ್‌ಎ’ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.