ADVERTISEMENT

ಮಾನವ–ಪ್ರಾಣಿ ಸಂಘರ್ಷ ತಡೆಗೆ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 19:30 IST
Last Updated 1 ಜನವರಿ 2019, 19:30 IST
   

ಅರಣ್ಯ ವ್ಯಾಪ್ತಿ ಪ್ರದೇಶದಲ್ಲಿ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ತಡೆಯುವುದು ಹಾಗೂ ಪ್ರಾಣಿಗಳ ಬೇಟೆಯಾಡುವುದನ್ನು ನಿಯಂತ್ರಿಸಲು ನೆರವಾಗುವ ಮೊಬೈಲ್‌ ಆ್ಯಪ್‌ ಅನ್ನು ಬೆಂಗಳೂರಿನ ಸಿಎಂಆರ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

ಈ ಆ್ಯಪ್‌ಗೆ ಫೌನಾಟಿ (FaunaT) ಎಂದು ಹೆಸರಿಡಲಾಗಿದೆ. ಅರಣ್ಯ ಸಿಬ್ಬಂದಿಯು ಕಾಡಿನಲ್ಲಿ ತಾವು ಸಂಚರಿಸುವ ಸ್ಥಳದಲ್ಲಿನ ಮಾಹಿತಿ ದಾಖಲಿಸಿಕೊಳ್ಳಲು ಹಾಗೂ ಪರಸ್ಪರ ಹಂಚಿಕೊಳ್ಳಲು ನೆರವಾಗಲಿದೆ. ಆಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಕಾರ್ಯ
ನಿರ್ವಹಿಸುವ ಸರಳ ಕಿರುತಂತ್ರಾಂಶ ಇದಾಗಿದೆ.

ಜಿಪಿಎಸ್ ಬಳಸಿ ಈ ಆ್ಯಪ್‌ ಸಹಾಯದಿಂದ ವನ್ಯಜೀವಿಗಳ ಚಲನವಲನ, ಪ್ರಾಣಿಗಳ ಬೇಟೆಯಾಡುವಂತಹ ಅಪರಾಧ ಚಟುವಟಿಕೆಗಳನ್ನು ದಾಖಲಿಸಲು ಇದು ನೆರವಾಗಲಿದೆ. ಅರಣ್ಯ ಸಂರಕ್ಷಕರ ಗಸ್ತು ತಿರುಗುವ ಮಾರ್ಗದ ನಕ್ಷೆ ವಿವರವನ್ನೂ ದಾಖಲಿಸಿಕೊಳ್ಳಲಿದ್ದು, ದೈನಂದಿನ ಚಟುವಟಿಕೆ, ಕಾರ್ಯನಿರ್ವಹಣೆಯ ಮಾಹಿತಿಗಳನ್ನೂ ಪಡೆಯಬಹುದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.