ADVERTISEMENT

ಎಲ್‌ಐಸಿ ಐಪಿಒ: ಭಾನುವಾರವೂ ತೆರೆದಿರಲಿದೆ ಎಎಸ್‌ಬಿಎ ಬ್ಯಾಂಕ್ ಶಾಖೆ

ಪಿಟಿಐ
Published 4 ಮೇ 2022, 16:23 IST
Last Updated 4 ಮೇ 2022, 16:23 IST
   

ಮುಂಬೈ: ಎಲ್‌ಐಸಿ ಐಪಿಒಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸಲು ನೆರವಾಗುವ ಉದ್ದೇಶದಿಂದ ಎಎಸ್‌ಬಿಎ ಗೊತ್ತುಪಡಿಸಿದ ಬ್ಯಾಂಕ್‌ ಶಾಖೆಗಳನ್ನು ಸಾರ್ವಜನಿಕರಿಗೆ ಭಾನುವಾರವೂ ತೆರೆದಿರಿಸಬಹುದು ಎಂದು ಆರ್‌ಬಿಐ ಹೇಳಿದೆ.

ಎಲ್‌ಐಸಿ ಐಪಿಒ ಬಿಡ್ ಸಲ್ಲಿಸಲು ಸೋಮವಾರದವರೆಗೆ ಅವಕಾಶ ಇದೆ. ಶನಿವಾರವೂ ಬಿಡ್ ಸಲ್ಲಿಸಬಹುದು. ಬಿಡ್ ಸಲ್ಲಿಕೆಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರವು, ಎಎಸ್‌ಬಿಎ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುವ ಶಾಖೆಗಳನ್ನು ಭಾನುವಾರವೂ ತೆರೆಯಲು ಮನವಿ ಮಾಡಿತ್ತು.

‘ಈ ವಿಷಯವನ್ನು ಪರಿಶೀಲಿಸಲಾಗಿದ್ದು, ಎಎಸ್‌ಬಿಎ ಗೊತ್ತುಪಡಿಸಿದ ಶಾಖೆಗಳನ್ನು ಬ್ಯಾಂಕ್‌ಗಳು ಭಾನುವಾರವೂ (ಮೇ 8) ಸಾರ್ವಜನಿಕರಿಗೆ ತೆರೆದಿರಿಸಬಹುದು’ ಎಂದು ಆರ್‌ಬಿಐ ಹೇಳಿದೆ. ಎಎಸ್‌ಬಿಎ ವ್ಯವಸ್ಥೆಯ ಮೂಲಕ ಐಪಿಒ ಬಿಡ್‌ ಸಲ್ಲಿಸಲು ಅವಕಾಶ ಇರುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.