ADVERTISEMENT

ವಹಿವಾಟು ವಿಸ್ತರಣೆಗೆ ‘ಏಸುಸ್‌’ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 20:40 IST
Last Updated 13 ಸೆಪ್ಟೆಂಬರ್ 2019, 20:40 IST

ಬೆಂಗಳೂರು: ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ತಯಾರಿಕಾ ಕಂಪನಿ ‘ಏಸುಸ್‌’, ಈ ವರ್ಷದ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ 100 ಮಳಿಗೆ ತೆರೆಯುವ ಗುರಿ ಹಾಕಿಕೊಂಡಿದೆ.

ನಗರದ ಕೋರಮಂಗಲದ 80 ಅಡಿ ರಸ್ತೆಯಲ್ಲಿ ಆರಂಭಿಸಲಾದ ಹೊಸ ಮಾರಾಟ ಮಳಿಗೆ ಉದ್ಘಾಟಿಸಿದಕಂಪನಿಯ ಮಾರಾಟ ವಿಭಾಗದ ವ್ಯವಸ್ಥಾಪಕ ಜಿಗ್ನೇಶ್‌ ಭಾವಸಾರ್‌ ಈ ವಿಷಯ ತಿಳಿಸಿದ್ದಾರೆ.

‘ಏಸುಸ್‌ ಲ್ಯಾಪ್‌ಟಾಪ್‌ಗಳಮಾರಾಟದಲ್ಲಿ ಏರಿಕೆ ಕಂಡಿದೆ. ಮೊಬೈಲ್‌ಗಳೂಕಳೆದ ವರ್ಷದಿಂದ ದಾಖಲೆ ಮಾರಾಟ ಕಂಡಿವೆ. ತನ್ನ ಉನ್ನತೀಕರಿಸಿದ ತಂತ್ರಜ್ಞಾನದ ಮೂಲಕ ಕಂಪನಿ ಗ್ರಾಹಕರಲ್ಲಿ ವಿಶ್ವಾಸ ಮೂಡಿಸಿದೆ’ ಎಂದರು.ಮಳಿಗೆ ಮಾಲೀಕ ಗೌರವ್‌ ಜೈನ್‌ ಉಪಸ್ಥಿತರಿದ್ದರು. ವಿವೊ ಬುಕ್, ಝೆನ್ ಬುಕ್, ಝೆನ್ ಬುಕ್‌ ಫ್ಲಿಪ್ ಮತ್ತು ರಿಪಬ್ಲಿಕ್ ಆಫ್ ಗೇಮರ್ಸ್ (ಆರ್‌ಒಜಿ) ಲ್ಯಾಪ್‌ಟಾ‌ಪ್‌ಗಳುಮಳಿಗೆಯಲ್ಲಿ ಲಭ್ಯವಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.