ADVERTISEMENT

ವಿಮಾನ ಇಂಧನ ದರ ₹ 3,663 ಏರಿಕೆ

ಪಿಟಿಐ
Published 1 ಮಾರ್ಚ್ 2021, 11:03 IST
Last Updated 1 ಮಾರ್ಚ್ 2021, 11:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿಮಾನ ಇಂಧನ (ಎಟಿಎಫ್‌) ದರವನ್ನು ಸೋಮವಾರ ಶೇ 6.5ರಷ್ಟು ಗರಿಷ್ಠ ಏರಿಕೆ ಮಾಡಲಾಗಿದೆ.

ದೆಹಲಿಯಲ್ಲಿ ವಿಮಾನ ಇಂಧನ ದರ ಪ್ರತಿ ಕಿಲೊ ಲೀಟರ್‌ಗೆ ₹ 3,663ರಷ್ಟು (ಶೇ 6.5) ಹೆಚ್ಚಿಸಲಾಗಿದ್ದು, ₹ 59,400.91ಕ್ಕೆ ತಲುಪಿದೆ. ಫೆಬ್ರುವರಿಯಿಂದ ಈವರೆಗೆ ಮೂರನೇ ಬಾರಿ ದರ ಏರಿಕೆ ಮಾಡಿದಂತಾಗಿದೆ.

ಅಂತರರಾಷ್ಟ್ರೀಯ ತೈಲ ದರದಲ್ಲಿನ ಏರಿಕೆಯಿಂದಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಎಟಿಎಫ್‌ ದರ ಹೆಚ್ಚಿಸಿವೆ. ಬ್ರೆಂಟ್‌ ಕಚ್ಚಾ ತೈಲ ದರವು ಸೋಮವಾರ ಒಂದು ಬ್ಯಾರಲ್‌ಗೆ 65.49 ಡಾಲರ್‌ಗಳಿಗೆ ತಲುಪಿದೆ. ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ಗರಿಷ್ಠ ದರ ಇದಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.