ADVERTISEMENT

ಕೋವಿಡ್‌–19: ವಾಹನ ಮೇಳ ಮುಂದಕ್ಕೆ

ಪಿಟಿಐ
Published 2 ಆಗಸ್ಟ್ 2021, 14:56 IST
Last Updated 2 ಆಗಸ್ಟ್ 2021, 14:56 IST
ಗ್ರೇಟರ್‌ ನೋಯಿಡಾದಲ್ಲಿ ಹಿಂದಿನ ವರ್ಷ ನಡೆದಿದ್ದ ವಾಹನ ಪ್ರದರ್ಶನ ಮೇಳದಲ್ಲಿ ಭಾಗವಹಿಸಿದ್ದ ಜನರು –ಪಿಟಿಐ ಚಿತ್ರ
ಗ್ರೇಟರ್‌ ನೋಯಿಡಾದಲ್ಲಿ ಹಿಂದಿನ ವರ್ಷ ನಡೆದಿದ್ದ ವಾಹನ ಪ್ರದರ್ಶನ ಮೇಳದಲ್ಲಿ ಭಾಗವಹಿಸಿದ್ದ ಜನರು –ಪಿಟಿಐ ಚಿತ್ರ   

ನವದೆಹಲಿ: ಮುಂದಿನ ವರ್ಷದ ಫೆಬ್ರುವರಿಯಲ್ಲಿ ಗ್ರೇಟರ್ ನೊಯಿಡಾದಲ್ಲಿ ನಡೆಯಬೇಕಿರುವ ವಾಹನ ಪ್ರದರ್ಶನ ಮೇಳವನ್ನು (ಆಟೊ ಎಕ್ಸ್‌ಪೊ) ಕೋವಿಡ್‌–19 ಸಾಂಕ್ರಾಮಿಕದ ಕಾರಣದಿಂದಾಗಿ ಮುಂದೂಡಲಾಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಸೋಮವಾರ ತಿಳಿಸಿದೆ.

ಈ ಮೇಳಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಸೇರುವುದರಿಂದ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ನಿಗಾ ವಹಿಸುವುದು ಕಷ್ಟವಾಗಲಿದೆ. ಸೋಂಕು ಹರಡುವ ಸಾಧ್ಯತೆಯು ಗರಿಷ್ಠ ಮಟ್ಟದಲ್ಲಿ ಇರುತ್ತದೆ. ಈ ಕಾರಣಗಳಿಂದಾಗಿ ವಾಹನಗಳ ಪ್ರದರ್ಶನ ಮೇಳವನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಪ್ರಧಾನ ನಿರ್ದೇಶಕ ರಾಜೇಶ್‌ ಮೆನನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್‌ ಪರಿಸ್ಥಿತಿ ಮತ್ತು ಇತರ ಜಾಗತಿಕ ವಾಹನ ಪ್ರದರ್ಶನ ಮೇಳಗಳು ನಡೆಯುವ ದಿನಾಂಕಗಳನ್ನು ಪರಿಗಣಿಸಿ ಮುಂದಿನ ಆವೃತ್ತಿಯ ವಾಹನ ಮೇಳದ ದಿನಾಂಕವನ್ನು ಈ ವರ್ಷದ ಕೊನೆಯಲ್ಲಿ ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ADVERTISEMENT

2020ರ ವಾಹನ ಪ್ರದರ್ಶನ ಮೇಳದಲ್ಲಿ ಆರು ಲಕ್ಷಕ್ಕೂ ಅಧಿಕ ಜನ ಭಾಗವಹಿಸಿದ್ದರು. 108 ಕಂಪನಿಗಳು 352 ವಾಹನಗಳನ್ನು ಪ್ರದರ್ಶಿಸಿದ್ದವು. ಸುಮಾರು 70 ಹೊಸ ವಾಹನಗಳು ಅನಾವರಣಗೊಂಡಿದ್ದವು. 35 ವಿದ್ಯುತ್‌ ಚಾಲಿತ ವಾಹನಗಳು ಕೂಡಾ ಅನಾವರಣ ಆಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.