ADVERTISEMENT

ಜನವರಿ: ವಾಹನ ಮಾರಾಟ ಇಳಿಕೆ

ಪಿಟಿಐ
Published 2 ಫೆಬ್ರುವರಿ 2020, 20:14 IST
Last Updated 2 ಫೆಬ್ರುವರಿ 2020, 20:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಂದಗತಿಯ ಆರ್ಥಿಕತೆಯು ದೇಶದಲ್ಲಿ ವಾಹನ ಮಾರಾಟದಲ್ಲಿ ಇಳಿಕೆಗೆ ಕಾರಣವಾಗಿದೆ.

ಜನವರಿಯಲ್ಲಿ ಮಾರುತಿ ಸುಜುಕಿ ಹೊರತುಪಡಿಸಿ, ಟಾಟಾ ಮೋಟರ್ಸ್‌, ಮಹೀಂದ್ರಾ, ಹುಂಡೈ ಮತ್ತು ಟೊಯೋಟ ಕಂಪನಿಗಳ ಮಾರಾಟದಲ್ಲಿ ಇಳಿಕೆಯಾಗಿದೆ.

ಮಾರುತಿ ಸುಜುಕಿ ಇಂಡಿಯಾದ ಒಟ್ಟಾರೆ ಮಾರಾಟ ಶೇ 1.6ರಷ್ಟು ಹೆಚ್ಚಾಗಿದ್ದು, 1,54,123 ವಾಹನ
ಗಳನ್ನು ಮಾರಾಟ ಮಾಡಿದೆ.

ADVERTISEMENT

ದೇಶಿ ಮಾರಾಟ ಶೇ 1.7ರಷ್ಟು ಹೆಚ್ಚಾಗಿದ್ದು, 1.42 ಲಕ್ಷದಿಂದ 1.44 ಲಕ್ಷಕ್ಕೆ ಏರಿಕೆಯಾಗಿದೆ. ಯುಟಿಲಿಟಿ ವಾಹನ ಮಾರಾಟದಲ್ಲಿ ಮಾತ್ರವೇ ಶೇ 26.6ರಷ್ಟು ಇಳಿಕೆಯಾಗಿದೆ.

ಇಳಿಕೆ: ಟಾಟಾ ಮೋಟರ್ಸ್‌ನ ಒಟ್ಟಾರೆ ಮಾರಾಟ ಶೇ 17.74ರಷ್ಟು ಕಡಿಮೆಯಾಗಿದೆ. 58,185 ವಾಹನ
ಗಳನ್ನು ಮಾರಾಟ ಮಾಡಿದೆ. ಹುಂಡೈ ಮೋಟರ್‌ ಇಂಡಿಯಾ ಕಂಪನಿಯ ಮಾರಾಟದಲ್ಲಿ ಶೇ 3.37ರಷ್ಟು ಇಳಿಕೆಯಾಗಿದೆ. ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯ ಮಾರಾಟದಲ್ಲಿ ಶೇ 6ರಷ್ಟು ಕಡಿಮೆಯಾಗಿದೆ.

ಟೊಯೋಟ ಕಿರ್ಲೋಸ್ಕರ್ ಮೋಟರ್‌ನ ಮಾರಾಟ ಶೇ 41ರಷ್ಟು ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.