ಎಕ್ಸಿಸ್
ನವದೆಹಲಿ: ಹೂಡಿಕೆದಾರರಿಗೆ ₹2 ಲಕ್ಷ ಕೋಟಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಎಕ್ಸಿಸ್ ಮ್ಯೂಚುವಲ್ ಫಂಡ್‌ನ ಮಾಜಿ ನಿಧಿ ನಿರ್ವಾಹಕ ವೀರೇಶ್ ಜೋಷಿ ಅವರನ್ನು ಇ.ಡಿ ಬಂಧಿಸಿದೆ.
ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯವೊಂದು ಜೋಷಿ ಅವರನ್ನು ಆಗಸ್ಟ್ 8ರವರೆಗೆ ಇ.ಡಿ ವಶಕ್ಕೆ ಒಪ್ಪಿಸಿದೆ.
ಕೆಲವು ಮಾಹಿತಿಗಳನ್ನು ಮೊದಲೇ ಪಡೆದುಕೊಳ್ಳುವ ಬ್ರೋಕರ್‌ಗಳು ಅಥವಾ ವರ್ತಕರು ತಮ್ಮ ಲಾಭಕ್ಕಾಗಿ ಷೇರುಗಳ ವಹಿವಾಟು ನಡೆಸುವುದನ್ನು ‘ಫ್ರಂಟ್ ರನ್ನಿಂಗ್’ ಎಂದು ಕರೆಯಲಾಗುತ್ತದೆ. ಈ ಬಗೆಯ ವಹಿವಾಟನ್ನು ಅನೈತಿಕ, ಅಕ್ರಮ ಎಂದು ಗುರುತಿಸಲಾಗಿದೆ. ‘ಫ್ರಂಟ್ ರನ್ನಿಂಗ್’ ಚಟುವಟಿಕೆಗಳಲ್ಲಿ ತೊಡಗಿಕೊಂಡು ಹೂಡಿಕೆದಾರರಿಗೆ ₹2 ಲಕ್ಷ ಕೋಟಿವರೆಗೆ ವಂಚಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದು.
ಈ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆಯು 2022ರಲ್ಲಿ ಶೋಧ ಕಾರ್ಯ ಕೈಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.