ADVERTISEMENT

ಬಂಧನ್ ಬ್ಯಾಂಕ್‌ ಎಂಎಬಿ ಮೊತ್ತ ಇಳಿಕೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 12:53 IST
Last Updated 28 ಜನವರಿ 2026, 12:53 IST
ಷೇರುಪೇಟೆ ಪ್ರವೇಶಕ್ಕೆ ಬಂಧನ್ ಬ್ಯಾಂಕ್‌ ಸಿದ್ಧತೆ
ಷೇರುಪೇಟೆ ಪ್ರವೇಶಕ್ಕೆ ಬಂಧನ್ ಬ್ಯಾಂಕ್‌ ಸಿದ್ಧತೆ   

ಬೆಂಗಳೂರು: ಖಾಸಗಿ ವಲಯದ ಬಂಧನ್‌ ಬ್ಯಾಂಕ್‌ ತನ್ನ ಸ್ಟ್ಯಾಂಡರ್ಡ್‌ ಉಳಿತಾಯ ಖಾತೆಗಳಲ್ಲಿ ತಿಂಗಳೊಂದರಲ್ಲಿ ಕಾಯ್ದುಕೊಳ್ಳಬೇಕಾದ ಸರಾಸರಿ ಮೊತ್ತವನ್ನು (ಎಂಎಬಿ) ತಗ್ಗಿಸುತ್ತಿರುವುದಾಗಿ ಹೇಳಿದೆ.

ಆದರೆ ಎಂಎಬಿ ಮೊತ್ತ ತಗ್ಗಿದ್ದರೂ ಖಾತೆಯ ಜೊತೆ ಸಿಗುವ ವೈಶಿಷ್ಟ್ಯಗಳು ಮೊದಲಿನಂತೆಯೇ ಮುಂದುವರಿಯಲಿವೆ ಎಂದು ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ. ಸ್ಟ್ಯಾಂಡರ್ಡ್‌ ಉಳಿತಾಯ ಖಾತೆಗಳಿಗೆ ಅನ್ವಯವಾಗುವ ಎಂಎಬಿ ಮೊತ್ತ ₹5,000 ಇದ್ದಿದ್ದು ಫೆಬ್ರುವರಿ 1ರಿಂದ ಅನ್ವಯವಾಗುವಂತೆ ₹2,000ಕ್ಕೆ ಇಳಿಕೆ ಆಗಲಿದೆ.

‘ದೇಶದಾದ್ಯಂತ ಇರುವ ಬ್ಯಾಂಕ್‌ನ ಲಕ್ಷಾಂತರ ಗ್ರಾಹಕರಿಗೆ ಬ್ಯಾಂಕಿಂಗ್‌ ಸೇವೆಗಳು ಇನ್ನಷ್ಟು ಕೈಗೆಟಕುವಂತೆ ಆಗಲಿ, ಹೆಚ್ಚು ಸುಲಭವಾಗಿ ಅವರಿಗೆ ಸೇವೆಗಳು ಲಭ್ಯವಾಗಲಿ ಎಂಬ ಅಪೇಕ್ಷೆಯೊಂದಿಗೆ ಈ ಬದಲಾವಣೆ ತರಲಾಗಿದೆ. ಅದರಲ್ಲೂ ಮುಖ್ಯವಾಗಿ ಅರೆನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರನ್ನು ಗಮನದಲ್ಲಿ ಇರಿಸಿಕೊಂಡು ಹೀಗೆ ಮಾಡಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ. 

ADVERTISEMENT

‘ಎಂಎಬಿ ಅಗತ್ಯವನ್ನು ಕಡಿಮೆ ಮಾಡುವ ಮೂಲಕ ನಾವು ಬ್ಯಾಂಕಿಂಗ್‌ ಸೇವೆಗಳು ಹೆಚ್ಚು ಕೈಗೆಟಕುವಂತೆ ಮಾಡುತ್ತಿದ್ದೇವೆ’ ಎಂದು ಬ್ಯಾಂಕ್‌ನ ಇ.ಡಿ. ಹಾಗೂ ಸಿ.ಬಿ.ಒ ರಾಜಿಂದರ್‌ ಕುಮಾರ್‌ ಬಬ್ಬರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.