ADVERTISEMENT

ಬ್ಯಾಂಕ್ ಆಫ್ ಬರೋಡ ತಿರಂಗಾ ಠೇವಣಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 16:35 IST
Last Updated 24 ಆಗಸ್ಟ್ 2022, 16:35 IST

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್‌ಗಳ ಪೈಕಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡ, ಬರೋಡ ತಿರಂಗಾ ಠೇವಣಿ ಯೋಜನೆ ಆರಂಭಿಸಿದೆ. ಇದರ ಅಡಿಯಲ್ಲಿ ಅವಧಿ ಠೇವಣಿಗಳಿಗೆ ಹೆಚ್ಚಿನ ಬಡ್ಡಿ ಸಿಗಲಿದೆ.

ಎರಡು ಅವಧಿಗಳ ಠೇವಣಿಗಳು ಇವು. 444 ದಿನಗಳ ಠೇವಣಿ ಮೇಲೆ ಶೇಕಡ 5.75ರಷ್ಟು, 555 ದಿನಗಳ ಠೇವಣಿಗಳಿಗೆ ಶೇ 6ರಷ್ಟು ಬಡ್ಡಿ ನೀಡಲಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ. ಡಿಸೆಂಬರ್‌ 31ರವರೆಗೆ ಈ ಠೇವಣಿಗಳು ಮುಕ್ತವಾಗಿರಲಿವೆ. ₹ 2 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.

ಹಿರಿಯ ನಾಗರಿಕರಿಗೆ ಠೇವಣಿಗಳ ಮೇಲೆ ಶೇ 0.50ರಷ್ಟು ಹೆಚ್ಚುವರಿ ಬಡ್ಡಿ ಲಭ್ಯವಾಗಲಿದೆ. ಅಲ್ಲದೆ, ಅವಧಿಗೆ ಮೊದಲು ಹಿಂದಕ್ಕೆ ಪಡೆಯದಿರುವ ಆಯ್ಕೆಯಲ್ಲಿ ಶೇ 0.15ರಷ್ಟು ಹೆಚ್ಚುವರಿ ಬಡ್ಡಿ ಇರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.