ADVERTISEMENT

ಬ್ಯಾಂಕ್ ಆಫ್ ಇಂಡಿಯಾ ಲಾಭ ಸರಿಸುಮಾರು ಮೂರು ಪಟ್ಟು ಏರಿಕೆ

ಪಿಟಿಐ
Published 28 ಜುಲೈ 2023, 16:56 IST
Last Updated 28 ಜುಲೈ 2023, 16:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಇಂಡಿಯಾದ ಜೂನ್‌ ತ್ರೈಮಾಸಿಕದ ಲಾಭವು ಸರಿಸುಮಾರು ಮೂರು ಪಟ್ಟು ಹೆಚ್ಚಾಗಿದ್ದು, ₹1,551 ಕೋಟಿಗೆ ತಲುಪಿದೆ. ಅನುತ್ಪಾದಕ ಸಾಲಗಳ ಪ್ರಮಾಣ ಕಡಿಮೆ ಆಗಿದ್ದು ಇದಕ್ಕೆ ಒಂದು ಮುಖ್ಯ ಕಾರಣ.

ಈ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಬ್ಯಾಂಕ್ ಆಫ್ ಇಂಡಿಯಾ ಒಟ್ಟು ₹15,821 ಕೋಟಿ ವರಮಾನ ಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹11,124 ಕೋಟಿ ಆಗಿತ್ತು.

ಬ್ಯಾಂಕ್‌ನ ಒಟ್ಟು ಎನ್‌ಪಿಎ ಪ್ರಮಾಣವು ಶೇ 22.14ರಷ್ಟು ಕಡಿಮೆ ಆಗಿದೆ. ಹಿಂದಿನ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಒಟ್ಟು ಎನ್‌ಪಿಎ ಮೊತ್ತ ₹44,415 ಕೋಟಿ ಆಗಿತ್ತು. ಅದು ಈಗ ₹34,583 ಕೋಟಿಗೆ ಇಳಿಕೆ ಆಗಿದೆ. ನಿವ್ವಳ ಎನ್‌ಪಿಎ ಪ್ರಮಾಣವು ಶೇ 16.96ರಷ್ಟು ಕಡಿಮೆ ಆಗಿದ್ದು, ₹8,119 ಕೋಟಿಗೆ ತಲುಪಿದೆ.

ADVERTISEMENT

ಬ್ಯಾಂಕ್‌ ಆಫ್ ಇಂಡಿಯಾ ನೀಡಿರುವ ಒಟ್ಟು ಸಾಲದಲ್ಲಿ ಶೇ 55.4ರಷ್ಟು ಪಾಲು ಹೊಂದಿರುವ ಸಣ್ಣ ಸಾಲಗಳು, ಕೃಷಿ ಸಾಲಗಳು ಹಾಗೂ ಎಂಎಸ್‌ಎಂಇ ವಲಯಕ್ಕೆ ನೀಡಿರುವ ಸಾಲಗಳ ಪ್ರಮಾಣವು ಶೇ 11.75ರಷ್ಟು ಹೆಚ್ಚಳ ಕಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.