ADVERTISEMENT

ಸದ್ಯಕ್ಕೆ ಬಚಾವ್ | ವಿವಿಧ ಬ್ಯಾಂಕ್‌ಗಳಿಂದ ಸಾಲ ಮರುಹೊಂದಾಣಿಕೆ ಆದೇಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 9:57 IST
Last Updated 31 ಮಾರ್ಚ್ 2020, 9:57 IST
ಕೆನರಾ ಬ್ಯಾಂಕ್
ಕೆನರಾ ಬ್ಯಾಂಕ್   

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೆನರಾ ಬ್ಯಾಂಕ್, ಯುಕೊ ಬ್ಯಾಂಕ್, ಬ್ಯಾಂಕ್ ಆಪ್ ಬರೋಡಾ, ಪಂಬಾಜ್ ನ್ಯಾಷನಲ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಇಂಡಿಯನ್ ಬ್ಯಾಂಕ್‌ಗಳು ರಿಸರ್ವ್‌ ಬ್ಯಾಂಕ್ ಆದೇಶದ ಅನ್ವಯ ಗ್ರಾಹಕರ ಸಾಲ ಮರುಹೊಂದಾಣಿಕೆ ಆದೇಶ ಪ್ರಕಟಿಸಿವೆ.

ಗ್ರಾಹಕರು ಪಾವತಿಸಬೇಕಿರುವ ವಿವಿಧ ಸಾಲಗಳ ಕಂತಿಗೆ ಮೂರು ತಿಂಗಳ ವಿನಾಯ್ತಿ ನೀಡಿರುವುದಾಗಿ ಘೋಷಿಸಿವೆ. ಬ್ಯಾಂಕ್‌ಗಳ ಕ್ರಮವನ್ನು ಗ್ರಾಹಕರು ಸ್ವಾಗತಿಸಿದ್ದಾರೆ. ಯುಕೊ ಬ್ಯಾಂಕ್‌ನ ಟ್ವಿಟರ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಗ್ರಾಹಕರೊಬ್ಬರು,'ಜನರ ಅಗತ್ಯ ಅರಿತು ಸ್ಪಂದಿಸುವ ಬ್ಯಾಂಕ್ ಅಧಿಕಾರಿಗಳಿಗೆ ವಂದನೆಗಳು' ಎಂದು ರಿಪ್ಲೈ ಮಾಡಿದ್ದಾರೆ.

ಬಂಡವಾಳ ಮತ್ತು ಗ್ರಾಹಕರ ಸಂಖ್ಯೆಯ ದೃಷ್ಟಿಯಿಂದ ದೇಶದ ಅತಿ ದೊಡ್ಡ ಬ್ಯಾಂಕ್‌ಗಳೆಸಿದ ಎಚ್‌ಡಿಎಫ್‌ಸಿ, ಆಕ್ಸಿಸ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌ಗಳು ಸಾಲ ಮರುಹೊಂದಾಣಿಕೆ ಮಾಹಿತಿ ನೀಡಬೇಕು ಎಂದು ಗ್ರಾಹಕರು ಸಾಮಾಜಿಕ ಜಾಲತಾಣಗಳ ಮೂಲಕ ವಿನಂತಿಸುತ್ತಿದ್ದಾರೆ.

ADVERTISEMENT

ಯುಕೊ ಬ್ಯಾಂಕ್

ಸಾಲ ಮರುಹೊಂದಾಣಿಕೆಕುರಿತು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿಟ್ವೀಟ್ ಮಾಡಿರುವ ಯುಕೊ ಬ್ಯಾಂಕ್, 'ನಿಮ್ಮ ಮುಂದಿನ ಪಾವತಿ ತಿಂಗಳು ಜೂನ್ 2020. ನಿಮ್ಮ ಸಾಲದ ಕಂತುಗಳನ್ನು ಈಗ ಮರುಹೊಂದಾಣಿಕೆ ಮಾಡಲಾಗುವುದು' ಎಂದು ಮಾಹಿತಿ ನೀಡಿದೆ.

ಬ್ಯಾಂಕ್‌ನ ಟ್ವಿಟರ್‌ ಖಾತೆಯಲ್ಲಿಯೇ ರಿಪ್ಲೈ ಮಾಡಿರುವ ಕೆಲ ಗ್ರಾಹಕರು, 'ಈಗಾಗಲೇ ಮಾರ್ಚ್‌ ತಿಂಗಳು ಮುಗಿಯಿತು. ನಮ್ಮ ಸಾಲದ ಕಂತನ್ನು ಈಗಾಗಲೇ ನಮ್ಮ ಎಸ್‌ಬಿ ಖಾತೆಯಿಂದ ಪಡೆದುಕೊಂಡಿದ್ದೀರಿ. ಅದನ್ನು ವಾಪಸ್ ಕೊಡ್ತೀರಾ? ನೀವು ಮೂರು ತಿಂಗಳ ಸವಲತ್ತು ಕೊಡ್ತಿಲ್ಲ. ಕೇವಲ ಎರಡು ತಿಂಗಳಿಗೆ ಅವಕಾಶ ಮಾಡಿಕೊಡ್ತಿದ್ದೀರಿ' ಎಂದು ಹೇಳಿದ್ದಾರೆ.

'ಎಚ್‌ಡಿಎಫ್‌ಸಿ ಮತ್ತು ಇತರ ಬ್ಯಾಂಕ್‌ಗಳುಯಾವಾಗ ಕ್ರಮ ಘೋಷಿಸುತ್ತವೆ?' ಎಂಬುದು ಹಲವು ಗ್ರಾಹಕರು ಕೇಳುತ್ತಿರುವ ಮುಖ್ಯ ಪ್ರಶ್ನೆಯಾಗಿದೆ.

ಕೆನರಾ ಬ್ಯಾಂಕ್ ವಿನಾಯ್ತಿ

ಕೆನರಾ ಬ್ಯಾಂಕ್ ಸಹ ಆರ್‌ಬಿಐ ಸೂಚನೆಯ ಅನ್ವಯ ತನ್ನ ಗ್ರಾಹಕರಿಗೆ ಸಾಲದ ಕಂತು ಕಟ್ಟುವುದರಿಂದ ವಿನಾಯ್ತಿ ನೀಡಿದೆ. ಈ ಕುರಿತು ಗ್ರಾಹಕರ ನೊಂದಾಯಿತ ಮೊಬೈಲ್‌ ಸಂಖ್ಯೆಗಳಿಗೆ ಎಸ್‌ಎಂಎಸ್ ಕಳಿಸಲಾಗಿದೆ ಎಂದು ಕೆನರಾ ಬ್ಯಾಂಕ್ ಟ್ವೀಟ್ ಮಾಡಿದೆ.

ಸಿಂಡಿಕೇಟ್ ಬ್ಯಾಂಕ್

ಸಿಂಡಿಕೇಟ್ ಬ್ಯಾಂಕ್ ಸಹ ತನ್ನ ಗ್ರಾಹಕರ ವಾಹನ ಸಾಲ, ಗೃಹ ಸಾಲ ಮತ್ತು ಉದ್ಯಮ ಸಾಲದ ಮರುಪಾವತಿಗೆ ಮೂರು ತಿಂಗಳ ಕಾಲಾವಕಾಶ ನೀಡುವುದಾಗಿ ಟ್ವೀಟ್ ಮಾಡಿದೆ.

ಇಂಡಿಯನ್ ಬ್ಯಾಂಕ್

ಇಂಡಿಯನ್ ಬ್ಯಾಂಕ್ ಸಹ ತನ್ನ ಗ್ರಾಹಕರಿಗೆ ಆರ್‌ಬಿಐ ಸಲಹೆಯಂತೆ ಅನುಕೂಲ ಮಾಡಿಕೊಟ್ಟಿರುವುದಾಗಿ ಟ್ವೀಟ್ ಮಾಡಿದೆ.

ಇಂಡಿಯನ್ ಓವರ್‌ಸೀಸ್‌ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್

ಬ್ಯಾಂಕ್ ಆಫ್ ಬರೋಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.