ADVERTISEMENT

ಐದು ದಿನ ಕೆಲಸಬ್ಯಾಂಕ್‌ಗೆ ನಿರ್ದೇಶನ ನೀಡಿಲ್ಲ: ಆರ್‌ಬಿಐ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 19:24 IST
Last Updated 20 ಏಪ್ರಿಲ್ 2019, 19:24 IST

ಮುಂಬೈ: ವಾಣಿಜ್ಯ ಬ್ಯಾಂಕ್‌ಗಳು ವಾರದಲ್ಲಿ ಐದು ದಿನ ಮಾತ್ರವೇ ಕೆಲಸ ಮಾಡುವಂತೆ ನಿರ್ದೇಶನ ನೀಡಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಆರ್‌ಬಿಐ ಸೂಚನೆಯ ಪ್ರಕಾರ ಬ್ಯಾಂಕ್‌ಗಳು ವಾರದಲ್ಲಿ ಐದು ದಿನ ಮಾತ್ರವೇ ಕೆಲಸ ಮಾಡಲಿವೆ ಎಂದು ಕೆಲವು ಮಾದ್ಯಮಗಳಲ್ಲಿ ವರದಿ ಮಾಡಿವೆ. ಆದರೆ, ಇದು ಸುಳ್ಳು. ಭಾನುವಾರ ಬಿಟ್ಟು, ಉಳಿದಂತೆ ತಿಂಗಳ ಎರಡು ಮತ್ತು ನಾಲ್ಕನೇ ಶನಿವಾರ ಮಾತ್ರವೇ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT