ADVERTISEMENT

ಸೂಚ್ಯಂಕದ ಓಟಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 23:55 IST
Last Updated 27 ಮಾರ್ಚ್ 2020, 23:55 IST

ಮುಂಬೈ (ಪಿಟಿಐ): ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಕ್ರಮಗಳು ದೇಶದ ಷೇರುಪೇಟೆಗಳಲ್ಲಿ ಉತ್ಸಾಹ ಮೂಡಿಸಲು ವಿಫಲವಾಗಿವೆ.ಮೂರು ದಿನಗಳ ಸೂಚ್ಯಂಕದ ಓಟಕ್ಕೆ ಶುಕ್ರವಾರ ತೆರೆ ಬಿದ್ದಿದೆ.

ಕೊರೊನಾದಿಂದಾಗಿ ಆರ್ಥಿಕ ಬೆಳವಣಿಗೆ ದರದ ಬಗ್ಗೆ ಆತಂಕ ವ್ಯಕ್ತವಾಗಿರುವುದು ಹೂಡಿಕೆ ಚಟುವಟಿಕೆಯನ್ನು ತಗ್ಗಿಸುವಂತೆ ಮಾಡಿದೆ. 2019–20ರಲ್ಲಿ ಜಿಡಿಪಿ ಬೆಳವಣಿಗೆ ಶೇ 4.7ರಷ್ಟಿರಲಿದೆ ಎಂದು ಆರ್‌ಬಿಐ ಅಂದಾಜು ಮಾಡಿದೆ. 2020–21ಕ್ಕೆ ಶೇ 5ರಷ್ಟಿರಲಿದೆ ಎಂದು ಹೇಳಿದೆ.

ಆರ್‌ಬಿಐ ಸುದ್ದಿಗೋಷ್ಠಿಗೂ ಮುನ್ನಜಾಗತಿಕ ಮಾರುಕಟ್ಟೆಯ ಸ್ಥಿರ ವಹಿವಾಟಿನ ಹಾದಿಯನ್ನು ಹಿಡಿದಿದ್ದ ದೇಶಿ ಷೇರುಪೇಟೆಗಳುಆರಂಭದ ವಹಿವಾಟಿನಲ್ಲಿ ಶೇ 4ರಷ್ಟು ಏರಿಕೆ ಕಂಡಿದ್ದವು.

ADVERTISEMENT

ಆದರೆ, ಆರ್‌ಬಿಐನಿಂದ ಉತ್ತೇಜನ ಕ್ರಮಗಳು ಪ್ರಕಟವಾಗುತ್ತಿದ್ದಂತೆಯೇ ಷೇರುಪೇಟೆಗಳ ದಿಕ್ಕು ತಪ್ಪಿ ಇಳಿಮುಖ ಹಾದಿ
ಹಿಡಿದವು.ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 131 ಅಂಶ ಇಳಿಕೆ ಕಂಡು 29,815 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 19 ಅಂಶ ಹೆಚ್ಚಾಗಿ 8,660 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.ಬಜಾಜ್‌ ಫೈನಾನ್ಸ್‌ ಶೇ 8ರಷ್ಟು ಗರಿಷ್ಠ ನಷ್ಟ ಕಂಡಿತು. ಹೀರೊಮೋಟೊಕಾರ್ಪ್‌, ಇಂಡಸ್‌ಇಂಡ್‌ ಬ್ಯಾಂಕ್‌, ಮಾರುತಿ ಮತ್ತು ಎಚ್‌ಸಿಎಲ್‌ ಟೆಕ್‌ ಕಂಪನಿಯ ಷೇರುಗಳಿಗೂ ನಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.