ADVERTISEMENT

ಪ್ರೀಮಿಯಂ ನವೀಕರಣ ಶೇ 17 ಹೆಚ್ಚಳ: ಭಾರ್ತಿ ಆಕ್ಸಾ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 14:52 IST
Last Updated 22 ಜೂನ್ 2020, 14:52 IST
ಜೀವ ವಿಮೆ
ಜೀವ ವಿಮೆ   

ನವದೆಹಲಿ: ಭಾರ್ತಿ ಆಕ್ಸಾ ಲೈಫ್‌ ಇನ್ಶುರೆನ್ಸ್ ಕಂಪನಿಯು 2020ರ ಮಾರ್ಚ್‌ 31ರ ಅಂತ್ಯಕ್ಕೆ ಪ್ರೀಮಿಯಂ ನವೀಕರಣದಿಂದ ಶೇ 17ರಷ್ಟು ಪ್ರಗತಿ ಸಾಧಿಸಿದ್ದು, ₹1,359 ಕೋಟಿ ಗಳಿಸಿದೆ.

2018–19ರಲ್ಲಿ ಪ್ರೀಮಿಯಂಗಳ ನವೀಕರಣದಿಂದ ₹ 1,164 ಕೋಟಿ ಗಳಿಸಿತ್ತು.ಒಟ್ಟಾರೆ ಪ್ರೀಮಿಯಂ ವರಮಾನ ಶೇ 5ರಷ್ಟು ವೃದ್ಧಿಯಾಗಿದ್ದು, ₹ 2,076 ಕೋಟಿಗಳಿಂದ ₹ 2,187 ಕೋಟಿಗಳಿಗೆ ಏರಿಕೆಯಾಗಿದೆ.

ನಿರ್ವಹಣಾ ಸಂಪತ್ತು ಮೌಲ್ಯ ಶೇ 21ರಷ್ಟು ಹೆಚ್ಚಾಗಿದ್ದು, ₹ 5,699 ಕೋಟಿಗಳಿಂದ ₹ 6,902 ಕೋಟಿಗಳಿಗೆ ತಲುಪಿದೆ.

ADVERTISEMENT

‘2019–20ನೇ ಹಣಕಾಸು ವರ್ಷದಲ್ಲಿ ಹಲವು ವಹಿವಾಟುಗಳಲ್ಲಿ ಉತ್ತಮ ಬೆಳವಣಿಗೆ ಸಾಧಿಸಿದ್ದೇವೆ. ಮಾರ್ಚ್‌ ತಿಂಗಳು ಅತ್ಯಂತ ಮಹತ್ವದ್ದಾಗಿದ್ದು, ಈ ತಿಂಗಳಿನಲ್ಲಿ ಕೊರೊನಾ ಪರಿಣಾಮ ಮತ್ತು ಲಾಕ್‌ಡೌನ್‌ ಪರಿಸ್ಥಿತಿಯು ದೇಶಿ ಜೀವ ವಿಮಾ ಉದ್ಯಮದ ಮೇಲೆ ಅಡ್ಡ ಪರಿಣಾಮ ಬೀರಿತ್ತು. ಹೀಗಿದ್ದರೂ ಕಂಪನಿಯ ಬೆಳವಣಿಗೆ ಮೇಲೆ ಪರಿಣಾಮ ಉಂಟಾಗಿಲ್ಲ. ಪ್ರೀಮಿಯಂ ನವೀಕರಣ ಮೊತ್ತ ಹಾಗೂ ಒಟ್ಟಾರೆ ಪ್ರೀಮಿಯಂ ವರಮಾನ ಹೆಚ್ಚಳದಿಂದಾಗಿ ಪ್ರಗತಿ ಸಾಧ್ಯವಾಯಿತು’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪರಾಗ್‌ ರಾಜಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.