ADVERTISEMENT

ಕ್ರೆಡ್‌ಆರ್‌: ಬೈಬ್ಯಾಕ್‌ ಪ್ಲಸ್‌ ಯೋಜನೆ

​ಪ್ರಜಾವಾಣಿ ವಾರ್ತೆ
Published 22 ಮೇ 2020, 19:45 IST
Last Updated 22 ಮೇ 2020, 19:45 IST

ಬೆಂಗಳೂರು: ಬೈಕ್‌ಗಳ ಮರು ಮಾರಾಟ ಕಂಪನಿ ಕ್ರೆಡ್‍ಆರ್ ಬೈಬ್ಯಾಕ್ ಪ್ಲಸ್ ಯೋಜನೆ ಪ್ರಕಟಿಸಿದೆ.ಈ ಸೌಲಭ್ಯವು ಬೆಂಗಳೂರಿನಲ್ಲಿರುವ ಕ್ರೆಡ್‍ಆರ್ ಷೋರೂಂಗಳಲ್ಲಿ ಲಭ್ಯವಿದೆ. ಈ ಬೈಕ್‌, ಬೈಬ್ಯಾಕ್ ಕಾರ್ಯಕ್ರಮದಡಿ ಗ್ರಾಹಕರು ದ್ವಿಚಕ್ರ ವಾಹನ ಖರೀದಿಸುವಾಗ ಭರವಸೆಯ ಬೈಬ್ಯಾಕ್ ಮೌಲ್ಯ ಪಡೆಯಲಿದ್ದಾರೆ. ಹೀಗೆ ಗಳಿಸಿದ ಮೌಲ್ಯವನ್ನು ಖರೀದಿ ಮಾಡಿದ ದ್ವಿಚಕ್ರ ವಾಹನದ ಮರು ಮಾರಾಟ ಮಾಡುವ ಸಂದರ್ಭದಲ್ಲಿ 12 ತಿಂಗಳೊಳಗೆ ಮರಳಿ ಪಡೆಯಬಹುದಾಗಿದೆ.

ಲಾಕ್‍ಡೌನ್ ಮುಗಿದ ನಂತರ ಬಹುತೇಕ ಜನರು ಸಮೂಹ ಅಥವಾ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣ ಮಾಡುವುದನ್ನು ನಿಲ್ಲಿಸಿ ತಮ್ಮ ದೈನಂದಿನ ಚಟುವಟಿಕೆಗಳ ಪ್ರಯಾಣಕ್ಕೆ ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನಗಳನ್ನು ಖರೀದಿಸಲಿದ್ದಾರೆ ಎಂಬ ನಿರೀಕ್ಷೆಯನ್ನು ಕ್ರೆಡ್‍ಆರ್ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT