ADVERTISEMENT

ಈ ಬಾರಿ ಲಾಭಾಂಶ ಇಲ್ಲ: ಬಯೋಕಾನ್

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 18:17 IST
Last Updated 29 ಏಪ್ರಿಲ್ 2021, 18:17 IST

ಬೆಂಗಳೂರು: ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಷೇರುದಾರರಿಗೆ ಲಾಭಾಂಶ ನೀಡುವುದಿಲ್ಲ ಎಂದು ಬಯೋಕಾನ್‌ ಕಂಪನಿಯು ತನ್ನ ವಾರ್ಷಿಕ ಹಣಕಾಸು ವರದಿಯಲ್ಲಿ ತಿಳಿಸಿದೆ.

ಕೋವಿಡ್‌–19 ಸಾಂಕ್ರಾಮಿಕದ ಎರಡನೆಯ ಅಲೆ ಸೃಷ್ಟಿಸಿರುವ ಅನಿಶ್ಚಿತ ಸ್ಥಿತಿ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಮಾಡುತ್ತಿರುವ ನಿರಂತರ ಹೂಡಿಕೆಯನ್ನು ಗಮನದಲ್ಲಿ ಇಟ್ಟುಕೊಂಡು 2020–21ನೇ ಹಣಕಾಸು ವರ್ಷಕ್ಕೆ ಲಾಭಾಂಶ ಘೋಷಣೆ ಮಾಡದೇ ಇರುವುದೇ ಸೂಕ್ತ ಎಂದು ಕಂಪನಿಯ ಆಡಳಿತ ಮಂಡಳಿಯ ನಿರ್ದೇಶಕರು ನಿರ್ಧರಿಸಿದ್ದಾರೆ ಎಂದು ಹೇಳಿದೆ.

ಕಂಪನಿಯ ನಿವ್ವಳ ಲಾಭವು 2019–20ನೇ ಹಣಕಾಸು ವರ್ಷದಲ್ಲಿದ್ದ ₹ 789 ಕೋಟಿಗೆ ಹೋಲಿಸಿದರೆ 2020–21ನೇ ಹಣಕಾಸು ವರ್ಷದಲ್ಲಿ ಶೇಕಡ 4ರಷ್ಟು ಇಳಿಕೆ ಆಗಿದ್ದು, ₹ 754 ಕೋಟಿಗೆ ತಲುಪಿದೆ. ಆದರೆ, ವರಮಾನವು ₹ 6,462 ಕೋಟಿಗಳಿಂದ ₹ 7,360 ಕೋಟಿಗಳಿಗೆ ವೃದ್ಧಿಯಾಗಿ, ಶೇ 14ರಷ್ಟು ಬೆಳವಣಿಗೆ ಕಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.