ADVERTISEMENT

ಬೆಂಗಳೂರು ಸೇರಿ ಕೆಲವೆಡೆ ಬ್ಲೂಸ್ಮಾರ್ಟ್‌ ಟ್ಯಾಕ್ಸಿ ಸೇವೆ ಸ್ಥಗಿತ

ಪಿಟಿಐ
Published 17 ಏಪ್ರಿಲ್ 2025, 12:26 IST
Last Updated 17 ಏಪ್ರಿಲ್ 2025, 12:26 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಬೆಂಗಳೂರು, ದೆಹಲಿ ಮತ್ತು ಮುಂಬೈನಲ್ಲಿ ಗುರುವಾರ ಬ್ಲೂಸ್ಮಾರ್ಟ್‌ ಟ್ಯಾಕ್ಸಿ ಸೇವೆ ದಿಢೀರ್ ಸ್ಥಗಿತಗೊಂಡಿದ್ದು, ಚಾಲಕರು ಮತ್ತು ಬಳಕೆದಾರರು ತೊಂದರೆಗೆ ಸಿಲುಕಿದ್ದಾರೆ.

ಬ್ಲೂಸ್ಮಾರ್ಟ್‌ ಕಂಪನಿಯು ಆ್ಯಪ್‌ ಆಧರಿತ ಟ್ಯಾಕ್ಸಿ ಸೇವೆ ಒದಗಿಸುತ್ತದೆ. ಈ ಮೂರು ನಗರಗಳ ವ್ಯಾಪ್ತಿಯಲ್ಲಿ 8 ಸಾವಿರಕ್ಕೂ ಹೆಚ್ಚು ಟ್ಯಾಕ್ಸಿ ಸೇವೆ ಸ್ಥಗಿತಗೊಂಡಿದೆ. ಬುಧವಾರ ಸಂಜೆಯಿಂದಲೇ ಸೇವೆಯಲ್ಲಿ ವ್ಯತ್ಯಯಗೊಂಡಿದ್ದು, ಈ ಕುರಿತು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ.

ಸ್ಥಗಿತಕ್ಕೆ ಕಾರಣ ಏನು?:

ADVERTISEMENT

ಬ್ಲೂಸ್ಮಾರ್ಟ್‌ ಕಂಪನಿಯ ಸಹ ಸಂಸ್ಥಾಪಕರಾದ ಅನ್ಮೋಲ್ ಮತ್ತು ಪುನೀತ್ ಜಗ್ಗಿ ಅವರು ನವೀಕರಿಸಬಹುದಾದ ಇಂಧನ ತಯಾರಿಸುವ ಜೆನ್ಸೋಲ್‌ ಕಂಪನಿ ಸ್ಥಾಪಿಸಿದ್ದಾರೆ. ಇದು ಬ್ಲೂಸ್ಮಾರ್ಟ್‌ನ ಪ್ರಮುಖ ವಿದ್ಯುತ್‌ ಗುತ್ತಿಗೆ ಪಾಲುದಾರ ಕಂಪನಿಯೂ ಆಗಿದೆ. ಇದಕ್ಕೆ ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳಿಂದ ನೀಡಿದ ಸಾಲವನ್ನು ಪ್ರವರ್ತಕರು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. 

ವಿದ್ಯುತ್‌ಚಾಲಿತ ವಾಹನಗಳ ಖರೀದಿಗೆ ನೀಡಿದ ಸಾಲವನ್ನು ಐಷಾರಾಮಿ ಅಪಾರ್ಟ್‌ಮೆಂಟ್‌ಗಳ ಖರೀದಿಗೆ ಬಳಸಿಕೊಂಡಿದ್ದಾರೆ. ಈ ಬಗ್ಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ತನಿಖೆ ನಡೆಸುತ್ತಿದೆ. ಹಾಗಾಗಿ, ಬ್ಲೂಸ್ಮಾರ್ಟ್ ಆ್ಯಪ್ ಸೇವೆ ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.