ADVERTISEMENT

ಬಿಎಂಡಬ್ಲ್ಯು ಕಾರ್‌ ಮಾರಾಟ ಶೇ 13ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 16:55 IST
Last Updated 4 ಜನವರಿ 2019, 16:55 IST
ಬಿಎಂಡಬ್ಲ್ಯು ಕಾರ್‌
ಬಿಎಂಡಬ್ಲ್ಯು ಕಾರ್‌   

ಬೆಂಗಳೂರು: ಜರ್ಮನಿಯ ವಿಲಾಸಿ ಕಾರ್‌ ತಯಾರಿಕಾ ಸಂಸ್ಥೆ ಬಿಎಂಡಬ್ಲ್ಯು 2018ರಲ್ಲಿ ತನ್ನ ಮೂರು ಬ್ರ್ಯಾಂಡ್‌ಗಳಾದ ‘ಬಿಎಂಡಬ್ಲ್ಯು’, ‘ಮಿನಿ’ ಕಾರ್‌ ಮತ್ತು ‘ಬಿಎಂಡಬ್ಲ್ಯು ಮೋಟೊರ‍್ಯಾಡ್‌’ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ.

10,405 ಬಿಎಂಡಬ್ಲ್ಯು ಕಾರ್‌ ಮತ್ತು 700 ‘ಮಿನಿ’ ಕಾರ್‌ಗಳನ್ನು ಮಾರಾಟ ಮಾಡಿದೆ.2017ರಲ್ಲಿ 421 ‘ಮಿನಿ’ ಮಾರಾಟವಾಗಿದ್ದವು. 2018ರಲ್ಲಿನ ಮಾರಾಟವು ಶೇ 13ರಷ್ಟು ಹೆಚ್ಚಳ ದಾಖಲಿಸಿದೆ ಎಂದು ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾ ತಿಳಿಸಿದೆ. ಬಿಎಂಡಬ್ಲ್ಯು ಮೋಟೊರ‍್ಯಾಡ್‌ 2,187 ಬೈಕ್‌ಗಳನ್ನು ಮಾರಾಟ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT