ADVERTISEMENT

ಕೆನರಾ, ಬಿಒಬಿಯಿಂದ ಸಾಲದ ಬಡ್ಡಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 15:26 IST
Last Updated 11 ಆಗಸ್ಟ್ 2023, 15:26 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿದ್ದರೂ ಸರ್ಕಾರಿ ಸ್ವಾಮ್ಯದ ಕೆಲವು ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರ ಹೆಚ್ಚಿಸಿವೆ.

ಕೆನರಾ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡ (ಬಿಒಬಿ) ಮತ್ತು ಬ್ಯಾಂಕ್ ಆಫ್‌ ಮಹಾರಾಷ್ಟ್ರ ಎಂಸಿಎಲ್‌ಆರ್ ಆಧಾರಿತ ಸಾಲದ ಮೇಲಿನ ಬಡ್ಡಿದರವನ್ನು ಶೇ 0.1ರವರೆಗೂ ಏರಿಕೆ ಮಾಡಿವೆ. ಇದರಿಂದಾಗಿ ಎಂಸಿಎಲ್ಆರ್‌ಗೆ ಜೋಡಣೆ ಆಗಿರುವ ಸಾಲಗಳ ಮೇಲಿನ ಇಎಂಐ ಹೆಚ್ಚಾಗಲಿದೆ.

ಒಂದು ವರ್ಷಕ್ಕೆ ಪರಿಷ್ಕೃತ ಎಂಸಿಎಲ್‌ಆರ್‌ ಶೇ 8.65ಕ್ಕೆ ಬದಲಾಗಿ ರಿಂದ ಶೇ 8.70ಕ್ಕೆ ಏರಿಕೆ ಆಗಿದೆ ಎಂದು ಬ್ಯಾಂಕ್‌ ಆಫ್‌ ಬರೋಡ ಷೇರುಪೇಟೆಗೆ ತಿಳಿಸಿದೆ. ಪರಿಷ್ಕೃತ ದರವು ಶನಿವಾರದಿಂದ ಜಾರಿಗೆ ಬರಲಿದೆ ಎಂದು ಹೇಳಿದೆ.

ADVERTISEMENT

ಕೆನರಾ ಬ್ಯಾಂಕ್‌ ಸಹ ಶನಿವಾರದಿಂದ ಜಾರಿಗೆ ಬರುವಂತೆ ಎಂಸಿಎಲ್‌ಆರ್‌ ಶೇ 0.5ರಷ್ಟು ಹೆಚ್ಚಿಸಿದ್ದು, ಗ್ರಾಹಕರಿಗೆ ನೀಡಿಕೆ ದರ ಶೇ 8.70ಕ್ಕೆ ತಲುಪಿದೆ.

ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಎಂಸಿಎಲ್‌ಆರ್‌ ಅನ್ನು ಶೇ 0.1ರಷ್ಟು ಏರಿಕೆ ಮಾಡಿದ್ದು ನೀಡಿಕೆ ದರ ಶೇ 8.60ಕ್ಕೆ ತಲುಪಿದೆ. ಪರಿಷ್ಕೃತ ದರವು ಗುರುವಾರದಿಂದಲೇ ಅನ್ವಯಿಸಲಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.