ADVERTISEMENT

ಬಿಪಿಎಲ್‌ನಿಂದ ಹೊಸ ಉತ್ಪನ್ನಗಳು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 13:57 IST
Last Updated 27 ಆಗಸ್ಟ್ 2021, 13:57 IST

ಬೆಂಗಳೂರು: ಬಿಪಿಎಲ್‌ ಕಂಪನಿಯು ‘ಹ್ಯಾಪಿ ಲಿಟಲ್ ಥಿಂಗ್ಸ್’ ಹೆಸರಿನಲ್ಲಿ ಹೊಸ ಉತ್ಪನ್ನಗಳನ್ನು ಸಿದ್ಧಪಡಿಸಿದೆ. ಸಣ್ಣ ಸಣ್ಣ ಸಂಗತಿಗಳೇ ದೊಡ್ಡ ಬದಲಾವಣೆಯನ್ನು ತರುತ್ತವೆ ಎಂಬ ಮಾತಿನಿಂದ ಇವು ಸ್ಫೂರ್ತಿ ಪಡೆದಿವೆ.

ಆಧುನಿಕ ತಂತ್ರಜ್ಞಾನದ ಬಗೆಬಗೆಯ ಹವಾನಿಯಂತ್ರಕಗಳು, ದೂಳುನಿರೋಧಕ ಫ್ಯಾನ್‌ಗಳು ಗ್ರಾಹಕರಿಗೆ ಲಭ್ಯವಿವೆ. ನೇಚರ್‌ಫ್ರೆಷ್ ತಂತ್ರಜ್ಞಾನದ ರೆಫ್ರಿಜರೇಟರ್‌ಗಳಲ್ಲಿ ಇರಿಸಿದ ಆಹಾರವು ತಾಜಾ ಆಗಿರುತ್ತದೆ, ಅತ್ಯಂತ ಸ್ಪಷ್ಟವಾಗಿ ದೃಶ್ಯಗಳನ್ನು ತೋರಿಸುವ 4ಕೆ ಆ್ಯಂಡ್ರಾಯ್ಡ್‌ ಸ್ಮಾರ್ಟ್‌ ಟಿ.ವಿ.ಗಳು ಲಭ್ಯವಿವೆ ಎಂದು ಕಂಪನಿಯ ಪ್ರಕಟಣೆ ಹೇಳಿದೆ.

ನೀರನ್ನು ಶೇ 30ರಷ್ಟು ಕಡಿಮೆ ಬಳಸುವ ವಾಷಿಂಗ್‌ ಮೆಷಿನ್‌ಗಳು, ಜನ ಇದ್ದಾಗ ತಾವಾಗಿಯೇ ಉರಿಯುವ ದೀಪಗಳು ಕೂಡ ಲಭ್ಯವಿವೆ. ಇವಲ್ಲದೆ, ಅಡುಗೆಮನೆಗೆ ಬೇಕಾಗುವ ಉಪಕರಣಗಳು ಹಾಗೂ ಗೃಹಬಳಕೆಯ ಇತರ ವಸ್ತುಗಳು ಕೂಡ ಇವೆ ಎಂದು ಕಂಪನಿ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.