ADVERTISEMENT

ರಷ್ಯಾ–ಉಕ್ರೇನ್ ಸಂಘರ್ಷ: 140 ಡಾಲರ್ ಸಮೀಪಕ್ಕೆ ಬ್ರೆಂಟ್ ಕಚ್ಚಾ ತೈಲ ದರ

ಏಜೆನ್ಸೀಸ್
Published 7 ಮಾರ್ಚ್ 2022, 3:15 IST
Last Updated 7 ಮಾರ್ಚ್ 2022, 3:15 IST
   

ಮುಂಬೈ: ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಏರುಗತಿಯಲ್ಲಿದ್ದು, ಒಂದು ಬ್ಯಾರಲ್‌ಗೆ 139.13 ಡಾಲರ್ ಆಗಿದೆ. ಇದು 14 ವರ್ಷಗಳಲ್ಲೇ ದಾಖಲೆಯ ದರವಾಗಿದೆ.

ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಹಿನ್ನೆಲೆಯಲ್ಲಿ ತೈಲ ಉದ್ಯಮಿಗಳು ಆತಂಕದಲ್ಲಿದ್ದು, ಉತ್ಪಾದನೆ ಮತ್ತು ಸರಬರಾಜಿನ ಮೇಲೆ ಹೊಡೆತ ಬಿದ್ದಿದೆ. 2008 ರಲ್ಲಿ ಕಚ್ಚಾ ತೈಲ ದರವು ಬ್ಯಾರೆಲ್‌ಗೆ 147 ಡಾಲರ್‌ಗೆ ತಲುಪಿದ್ದೇ ಇದುವರೆಗಿನ ದಾಖಲೆಯಾಗಿತ್ತು.

ಫೆಬ್ರುವರಿ 24ರಂದು ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ ನಂತರ ಬ್ರೆಂಟ್ ತೈಲದ ಪ್ರತಿ ಬ್ಯಾರೆಲ್ ಬೆಲೆ ಶೇಕಡ 33ರಷ್ಟು ಹೆಚ್ಚಾಗಿದೆ.

ADVERTISEMENT

ನ್ಯೂಯಾರ್ಕ್‌ನ ಏಪ್ರಿಲ್ ವಿತರಣೆಯ ಕಚ್ಚಾ ತೈಲ ದರವೂ ಪ್ರತಿ ಬ್ಯಾರಲ್‌ಗೆ ಭಾನುವಾರ 130.50 ಡಾಲರ್‌ಗೆ ಏರಿತ್ತು. ಬಳಿಕ, ಕೊಂಚ ಇಳಿಕೆಯಾಗಿದೆ.

ರಷ್ಯಾ ವಿರುದ್ಧ ಮತ್ತಷ್ಟು ಆರ್ಥಿಕ ನಿರ್ಬಂಧದ ಭಾಗವಾಗಿ ರಷ್ಯಾದ ತೈಲ ಆಮದುಗಳನ್ನು ನಿಷೇಧಿಸುವ ಬಗ್ಗೆ ಯುರೋಪಿಯನ್ ರಾಷ್ಟ್ರಗಳೊಂದಿಗೆ ಅಮೆರಿಕ ‘ಸಕ್ರಿಯ ಚರ್ಚೆ’ನಡೆಸುತ್ತಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ.

ತೈಲವು ತಾಂತ್ರಿಕವಾಗಿನಿರ್ಬಂಧಗಳಿಂದ ವಿನಾಯಿತಿ ಪಡೆದಿದ್ದರೂ ಸಹ, ರಷ್ಯಾದ ತೈಲ ರಫ್ತುದಾರರು ಖರೀದಿದಾರರನ್ನು ಹುಡುಕಲು ಹೆಣಗಾಡುತ್ತಿದ್ದಾರೆ. ರಷ್ಯಾದ ತೈಲವನ್ನು ಇನ್ನೂ ಖರೀದಿಸುತ್ತಿರುವ ಏಕೈಕ ಕಂಪನಿಗಳಲ್ಲಿ ಶೆಲ್ ಒಂದಾಗಿದೆ, ಆದರೂ ಅದು ಲಾಭವನ್ನು ಉಕ್ರೇನ್‌ಗೆ ದಾನ ಮಾಡುವುದಾಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.