ADVERTISEMENT

₹ 6 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಿದ ಬೈಜುಸ್!

ಪಿಟಿಐ
Published 11 ಮಾರ್ಚ್ 2022, 18:46 IST
Last Updated 11 ಮಾರ್ಚ್ 2022, 18:46 IST
   

ನವದೆಹಲಿ: ಆನ್‌ಲೈನ್‌ ಮೂಲಕ ಶಿಕ್ಷಣ ನೀಡುವ ಬೈಜುಸ್ ಕಂಪನಿಯು ₹ 6 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಿರುವುದಾಗಿ ಶುಕ್ರವಾರ ತಿಳಿಸಿದೆ. ಕಂಪನಿಯ ಸಿಇಒ ಬೈಜು ರವೀಂದ್ರನ್ ಅವರು ಈ ಮೊತ್ತದಲ್ಲಿ ಸರಿಸುಮಾರು ಅರ್ಧದಷ್ಟನ್ನು ತಾವೇ ಹೂಡಿಕೆ ಮಾಡಿದ್ದಾರೆ.

ಸುಮೇರು ವೆಂಚರ್ಸ್, ವಿಟ್ರುವಿಯನ್ ಪಾರ್ಟ್ನರ್ಸ್ ಮತ್ತು ಬ್ಲಾಕ್‌ರಾಕ್‌ ಕಂಪನಿಗಳು ಬಂಡವಾಳ ಸಂಗ್ರಹಣೆ ಸುತ್ತಿನಲ್ಲಿ ಪಾಲ್ಗೊಂಡಿದ್ದವು. ಕಂಪನಿಯು ಆರಂಭಿಕ ಸಾರ್ವಜನಿಕ ಕೊಡುಗೆ ಮೂಲಕ ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸಲು ಸಜ್ಜಾಗುತ್ತಿದ್ದು, ಈ ಸಂದರ್ಭದಲ್ಲಿಯೇ ಈ ಮೊತ್ತದ ಬಂಡವಾಳ ಸಂಗ್ರಹ ಮಾಡಿದೆ. ಇನ್ನು ಒಂದು ವರ್ಷದಲ್ಲಿ ಕಂಪನಿ ಐಪಿಒ ನಡೆಸಲಿದೆ ಎನ್ನಲಾಗಿದೆ.

ಈಗಿನ ಹೂಡಿಕೆಯ ಪರಿಣಾಮವಾಗಿ ರವೀಂದ್ರನ್ ಅವರು ಕಂಪನಿಯಲ್ಲಿ ಹೊಂದಿರುವ ಷೇರುಪಾಲು ಶೇಕಡ 23ರಿಂದ ಶೇ 25ಕ್ಕೆ ಏರಿಕೆ ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.