ADVERTISEMENT

ಬಿಎಸ್‌ಎನ್‌ಎಲ್‌ಗೆ ₹89 ಸಾವಿರ ಕೋಟಿ ನೆರವು

​ಪ್ರಜಾವಾಣಿ ವಾರ್ತೆ
Published 7 ಜೂನ್ 2023, 16:01 IST
Last Updated 7 ಜೂನ್ 2023, 16:01 IST
ನಿಷ್ಕ್ರಿಯ ಕಂಪೆನಿಗಳಿಂದ ₹17 ಸಾವಿರ ಕೋಟಿ ಜಮೆ
ನಿಷ್ಕ್ರಿಯ ಕಂಪೆನಿಗಳಿಂದ ₹17 ಸಾವಿರ ಕೋಟಿ ಜಮೆ   

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಕಂಪನಿಯ ಪುನಶ್ಚೇತನಕ್ಕೆ ಕೇಂದ್ರ ಸಚಿವ ಸಂಪುಟವು ₹89,047 ಕೋಟಿ ಮೊತ್ತದ ಮೂರನೆಯ ಆರ್ಥಿಕ ಪ್ಯಾಕೇಜ್‌ಗೆ ಬುಧವಾರ ಒಪ್ಪಿಗೆ ಸೂಚಿಸಿದೆ.

ಬಿಎಸ್‌ಎನ್‌ಎಲ್‌ ಕಂಪನಿಗೆ 4ಜಿ ಮತ್ತು 5ಜಿ ತರಂಗಾಂತರ ಹಂಚಿಕೆ ಕೂಡ ಪ್ಯಾಕೇಜ್‌ನ ಒಂದು ಭಾಗ ಎಂದು ಪ್ರಕಟಣೆ ತಿಳಿಸಿದೆ.

ತರಂಗಾಂತರ ಹಂಚಿಕೆಯು ಬಿಎಸ್‌ಎನ್‌ಎಲ್‌ಗೆ 4ಜಿ ಹಾಗೂ 5ಜಿ ಸೇವೆಗಳನ್ನು ದೇಶದಾದ್ಯಂತ ಆರಂಭಿಸಲು, ಮೊಬೈಲ್‌ ಸಂಪರ್ಕ ಇಲ್ಲದ ಹಳ್ಳಿಗಳಲ್ಲಿ 4ಜಿ ಸೇವೆ ಆರಂಭಿಸಲು ನೆರವಾಗುತ್ತದೆ.

ADVERTISEMENT

ಕೇಂದ್ರ ಸರ್ಕಾರವು ಬಿಎಸ್‌ಎನ್‌ಎಲ್ ಕಂಪನಿಯ ಪುನಶ್ಚೇತನಕ್ಕೆ ಈ ಹಿಂದೆಯೂ ಪ್ಯಾಕೇಜ್ ನೀಡಿತ್ತು. 2019ರಲ್ಲಿ ಬಿಎಸ್‌ಎನ್ಎಲ್ ಮತ್ತು ಎಂಟಿಎನ್‌ಎಲ್‌ ಪುನಶ್ಚೇತನಕ್ಕೆ ₹69 ಸಾವಿರ ಕೋಟಿ ನೀಡಲಾಗಿತ್ತು. 2022ರಲ್ಲಿ ₹1.64 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಲಾಗಿತ್ತು.

ಬಂಡವಾಳ ವೆಚ್ಚಕ್ಕೆ, ಸಾಲದ ಹೊರೆ ತಗ್ಗಿಸಿಕೊಳ್ಳಲು, ಹೊಂದಾಣಿಕೆ ಮಾಡಿದ ಒಟ್ಟು ವರಮಾನದ ಬಾಕಿ ಪಾವತಿಗೆ, ಬಿಬಿಎನ್‌ಎಲ್ ಮತ್ತು ಬಿಎಸ್‌ಎನ್‌ಎಲ್ ವಿಲೀನಕ್ಕೆ ಈ ಹಣಕಾಸಿನ ನೆರವುಗಳನ್ನು ಬಳಸಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.