ADVERTISEMENT

ಎಫ್‌ಡಿಐ ಮಿತಿ ಹೆಚ್ಚಳ, ಬಿಪಿಸಿಎಲ್‌ ಮಾರಾಟಕ್ಕೆ ನೆರವು

ಪಿಟಿಐ
Published 22 ಜುಲೈ 2021, 16:51 IST
Last Updated 22 ಜುಲೈ 2021, 16:51 IST

ನವದೆಹಲಿ: ಖಾಸಗಿಯವರಿಗೆ ಮಾರಾಟ ಮಾಡಲು ಗುರುತಿಸಲಾಗಿರುವ, ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳಲ್ಲಿ ವಿದೇಶಿ ಬಂಡವಾಳ (ಎಫ್‌ಡಿಐ) ಹೂಡಿಕೆಗೆ ಇರುವ ಮಿತಿಯನ್ನು ಹೆಚ್ಚಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟವು ಗುರುವಾರ ಅನುಮೋದನೆ ನೀಡಿದೆ. ಇದರಿಂದಾಗಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಬಿಪಿಸಿಎಲ್‌) ಕಂಪನಿಯನ್ನು ಮಾರಾಟ ಮಾಡಲು ಕೇಂದ್ರಕ್ಕೆ ಸಹಾಯ ಆಗಲಿದೆ ಎನ್ನಲಾಗಿದೆ.

ಈಗ ತೈಲ ಸಂಸ್ಕರಣಾ ಕಂಪನಿಗಳಲ್ಲಿ ಎಫ್‌ಡಿಐ ಮಿತಿ ಶೇಕಡ 49ರಷ್ಟು ಇದೆ. ಇದನ್ನು ಶೇ 100ಕ್ಕೆ ಹೆಚ್ಚಿಸಲು ಕೇಂದ್ರವು ಒಪ್ಪಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಿತಿಯು ಮುಂದುವರಿದಿದ್ದರೆ ಬಿಪಿಸಿಎಲ್‌ ಕಂಪನಿಯನ್ನು ವಿದೇಶಿ ಕಂಪನಿಗೆ ಮಾರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಬಿಪಿಸಿಎಲ್‌ನಲ್ಲಿ ಕೇಂದ್ರ ಹೊಂದಿರುವ ಶೇ 52.98ರಷ್ಟು ಷೇರು ಖರೀದಿಸಲು ಆಸಕ್ತಿ ತೋರಿರುವ ಮೂರು ಕಂಪನಿಗಳ ಪೈಕಿ ಎರಡು ವಿದೇಶಿ ಮೂಲದವು. ‘ಖಾಸಗೀಕರಣಕ್ಕೆ ಗುರುತಿಸಲಾಗಿರುವ ಕಂಪನಿಗಳಲ್ಲಿ ಮಾತ್ರ ಎಫ್‌ಡಿಐ ಮಿತಿ ಹೆಚ್ಚಿಸಲು ಒಪ್ಪಿಗೆ ನೀಡಲಾಗಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.