ನವದೆಹಲಿ: ವಾಟ್ಸ್‌ಆ್ಯಪ್ ಬ್ಯುಸಿನೆಸ್ ಆ್ಯಪ್ ಮೂಲಕ ದೇಶದ 25 ಸಾವಿರ ಮಹಿಳಾ ಉದ್ಯಮಿಗಳಿಗೆ ಡಿಜಿಟಲ್ ಕೌಶಲ ತರಬೇತಿ ನೀಡಲು ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ಮತ್ತು ಮೆಟಾ ಕಂಪನಿ ಯೋಜನೆ ಆರಂಭಿಸಿದೆ.
ಮೊದಲ ಹಂತವಾಗಿ ‘ವ್ಯಾಪಾರ ಸಖಿ’ ಯೋಜನೆಯು ಜೂನ್‌ನಿಂದ ನವೆಂಬರ್‌ವರೆಗೆ ಇರಲಿದೆ. ದೇಶದ ಹಲವು ಭಾಷೆಯಲ್ಲಿ ತರಬೇತಿ ನೀಡಲಿದೆ.
ಆನ್‌ಲೈನ್ ವ್ಯಾಪಾರದ ಬಗ್ಗೆ ಮಹಿಳಾ ಉದ್ಯಮಿಗಳಲ್ಲಿ ವಿಶ್ವಾಸಾರ್ಹತೆ ಮೂಡಿಸುವುದು, ಉತ್ಪನ್ನಗಳ ಪ್ರದರ್ಶನ, ಸ್ವಯಂಚಾಲಿತ ಸಂದೇಶಗಳು, ವಾಟ್ಸ್‌ಆ್ಯಪ್ ಮೂಲಕ ಜಾಹೀರಾತು ಪ್ರಸಾರದ ತರಬೇತಿಯನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.