ADVERTISEMENT

ಅಮೆಜಾನ್‌ನಲ್ಲಿ ಬರಲಿದೆ ಕ್ಯಾಂಪ್ಕೊ ಅಡಿಕೆ, ಕಾಳುಮೆಣಸು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 8:08 IST
Last Updated 26 ನವೆಂಬರ್ 2020, 8:08 IST
ಸುದ್ದಿಗೋಷ್ಠಿಯಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ಮಾತನಾಡಿದರು.   

ಮಂಗಳೂರು: ಕ್ಯಾಂಪ್ಕೊ ಸಂಸ್ಥೆಯು ಅಡಿಕೆ ಹಾಗೂ ಕಾಳುಮೆಣಸು ಅನ್ನು ಶೀಘ್ರದಲ್ಲೇ ಅಮೆಜಾನ್‌ನಲ್ಲಿ ಮಾರಾಟ ಮಾಡಲಿದೆ.

ಈಗಾಗಲೇ ಕ್ಯಾಂಪ್ಕೊ ಚಾಕಲೇಟ್ ಅಮೆಜಾನ್ ಮಾರುಕಟ್ಟೆಯಲ್ಲಿ ಲಭ್ಯ ಇದ್ದು, ಅಡಿಕೆಯನ್ನು ನೇರವಾಗಿ ಗ್ರಾಹಕರಿಗೆ ಚಿಲ್ಲರೆ ಮಾರಾಟ ಮಾಡಲಾಗುವುದು ಎಂದು ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

2019-20 ನೇ ಸಾಲಿನಲ್ಲಿ ₹1,848 ಕೋಟಿ ವಹಿವಾಟು ನಡೆಸಿದ್ದು, ₹32.10 ಕೋಟಿ ನಿವ್ವಳ ಲಾಭ ಗಳಿಸಿದೆ. ಡಿ.13ರಂದು ಸರ್ವ ಸದಸ್ಯರ ಮಹಾಸಭೆ ನಡೆಯಲಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.