ADVERTISEMENT

ಕೆನರಾ ಬ್ಯಾಂಕ್‌: ₹ 1 ಲಕ್ಷ ಕೋಟಿಗೂ ಅಧಿಕ ಚಿನ್ನದ ಸಾಲ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 12:57 IST
Last Updated 3 ಜುಲೈ 2022, 12:57 IST

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌, ಜೂನ್‌ 30ರ ಅಂತ್ಯಕ್ಕೆ ₹ 1 ಲಕ್ಷ ಕೋಟಿಗೂ ಅಧಿಕ ಮೊತ್ತದ ಚಿನ್ನದ ಸಾಲ ನೀಡಿದೆ.

ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ ಚಿನ್ನದ ಸಾಲ ವಿಭಾಗದಲ್ಲಿ ಶೇಕಡ 26.19ರಷ್ಟು ಬೆಳವಣಿಗೆ ಸಾಧಿಸಲಾಗಿದೆ. ಬ್ಯಾಂಕ್‌ನ 435 ಗೋಲ್ಡ್‌ ಲೋನ್‌ ಪ್ಲಾಜಾ ಶಾಖೆಗಳಿಂದಾಗಿ ಇದು ಸಾಧ್ಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಚಿನ್ನದ ಸಾಲ ವಿಭಾಗದಲ್ಲಿ ಮಾತ್ರವಲ್ಲದೆ, ರಿಟೇಲ್‌, ಗೃಹ, ಎಂಎಸ್‌ಎಂಇ, ಕೃಷಿ ಮತ್ತು ಕಾರ್ಪೊರೇಟ್‌ ಸಾಲಗಳಲ್ಲಿಯೂ ಎರಡಂಕಿ ಪ್ರಗತಿ ಸಾಧಿಸಿರುವುದಾಗಿ ಬ್ಯಾಂಕ್‌ನ ಬೆಂಗಳೂರು ಕೇಂದ್ರ ಕಚೇರಿಯ ಚೀಫ್‌ ಜನರಲ್‌ ಮ್ಯಾನೇಜರ್‌ ಭವೇಂದ್ರ ಕುಮಾರ್‌ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.