ADVERTISEMENT

ಯುಪಿಐ ಕ್ರೆಡಿಟ್‌ ಕಾರ್ಡ್‌ ಪಾವತಿಗೆ ಕೆನರಾ ಬ್ಯಾಂಕ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2023, 15:33 IST
Last Updated 27 ಜೂನ್ 2023, 15:33 IST
ಕೆನರಾ ಬ್ಯಾಂಕ್‌ ಉಳಿತಾಯ ಖಾತೆ ಬಡ್ಡಿ ಕಡಿತ
ಕೆನರಾ ಬ್ಯಾಂಕ್‌ ಉಳಿತಾಯ ಖಾತೆ ಬಡ್ಡಿ ಕಡಿತ   

ಬೆಂಗಳೂರು: ರುಪೇ ಕ್ರೆಡಿಟ್ ಕಾರ್ಡ್‌ನ ಹಣವನ್ನು ಯುಪಿಐ ವ್ಯವಸ್ಥೆಯ ಮೂಲಕ ಪಾವತಿ ಮಾಡುವ ಸೌಲಭ್ಯವನ್ನು ಕೆನರಾ ಬ್ಯಾಂಕ್ ಜಾರಿಗೆ ತಂದಿದೆ. ಈ ಸೌಲಭ್ಯವನ್ನು ಕೆನರಾ ಬ್ಯಾಂಕ್‌ನ ‘ಕೆನರಾ ಎಐ1’ ಆ್ಯಪ್‌ ಮೂಲಕ ಪಡೆಯಬಹುದು.

ಎನ್‌ಪಿಸಿಐ ಜೊತೆಗೂಡಿ ಈ ಸೌಲಭ್ಯವನ್ನು ಜಾರಿಗೆ ತಂದಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪೈಕಿ ತಾನೇ ಮೊದಲಿಗ ಎಂದು ಕೆನರಾ ಬ್ಯಾಂಕ್ ಹೇಳಿಕೊಂಡಿದೆ.

ಕೆನರಾ ಬ್ಯಾಂಕ್‌ ಗ್ರಾಹಕರು ಇನ್ನು ಮುಂದೆ ಯುಪಿಐ ಬಳಸಿ ತಮ್ಮ ಉಳಿತಾಯ ಖಾತೆಯಿಂದ ಮಾತ್ರವೇ ಅಲ್ಲದೆ, ರುಪೇ ಕ್ರೆಡಿಟ್ ಕಾರ್ಡ್‌ನಿಂದಲೂ ಪಾವತಿ ಮಾಡಬಹುದು ಎಂದು ಪ್ರಕಟಣೆ ಹೇಳಿದೆ. ರುಪೇ ಕ್ರೆಡಿಟ್‌ ಕಾರ್ಡ್‌ಗಳನ್ನು ಯುಪಿಐ ಜೊತೆ ಜೋಡಿಸುವ ವ್ಯವಸ್ಥೆಗೆ ಆರ್‌ಬಿಐ ಈಚೆಗೆ ಅನುಮತಿ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.