ADVERTISEMENT

ಸಾಲದ ಬಡ್ಡಿದರ ಶೇ 0.10ರಷ್ಟು ತಗ್ಗಿಸಿದ ಕೆನರಾ ಬ್ಯಾಂಕ್‌

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 16:10 IST
Last Updated 8 ಫೆಬ್ರುವರಿ 2021, 16:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ಭಾನುವಾರದಿಂದಲೇ ಜಾರಿಗೆ ಬರುವಂತೆ ನಿಧಿ ಆಧರಿಸಿದ ಸಾಲದ ಬಡ್ಡಿದರವನ್ನು (ಎಂಸಿಎಲ್‌ಆರ್‌) ಶೇ 0.10ರಷ್ಟು ಇಳಿಕೆ ಮಾಡಿದೆ.

ಪರಿಷ್ಕೃತ ಎಂಸಿಎಲ್‌ಆರ್‌ ಒಂದು ತಿಂಗಳಿಗೆ ಶೇ 6.70, ಮೂರು ತಿಂಗಳ ಅವಧಿಗೆ ಶೇ 6.95, ಆರು ತಿಂಗಳಿಗೆ ಶೇ 7.30 ಮತ್ತು ಒಂದು ವರ್ಷದ ಅವಧಿಗೆ ಶೇ 7.35ರಷ್ಟು ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ರೆಪೊ ದರಕ್ಕೆ ಸಂಪರ್ಕಿತ ಸಾಲದ ಬಡ್ಡಿದರವು (ಆರ್‌ಎಲ್‌ಎಲ್‌ಆರ್‌) ಶೇ 6.90ರಷ್ಟೇ ಇರಲಿದೆ ಎಂದೂ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.