ADVERTISEMENT

ಇಂಪೀರಿಯಲ್ ಬ್ಲ್ಯೂ ಖರೀದಿಗೆ ಸಿಸಿಐ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 14:37 IST
Last Updated 7 ಅಕ್ಟೋಬರ್ 2025, 14:37 IST
ವಿಸ್ಕಿ–ಪ್ರಾತಿನಿಧಿಕ ಚಿತ್ರ
ವಿಸ್ಕಿ–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಫ್ರಾನ್ಸ್‌ನ ಪನೊ ರಕಾಡ್‌ ಮಾಲೀಕತ್ವದ ‘ಇಂಪೀರಿಯಲ್‌ ಬ್ಲ್ಯೂ’ ವಿಸ್ಕಿಯನ್ನು ಖರೀದಿಸಲು ಭಾರತದ ಮದ್ಯ ತಯಾರಿಕಾ ಕಂಪನಿ ತಿಲಕ್‌ನಗರ್ ಇಂಡಸ್ಟ್ರೀಸ್‌ ಲಿಮಿಟೆಡ್‌ಗೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಮಂಗಳವಾರ ಒ‍ಪ್ಪಿಗೆ ನೀಡಿದೆ.

ಪನೊ ರಕಾಡ್‌ ಕಂಪನಿಗೆ ₹4,150 ಕೋಟಿ ಪಾವತಿಸಿ, ಇಂಪೀರಿಯಲ್‌ ಬ್ಲ್ಯೂ ವಿಸ್ಕಿಯ ವಹಿವಾಟನ್ನು ತಿಲಕ್‌ನಗರ್‌ ಇಂಡಸ್ಟ್ರೀಸ್‌ ಕಂಪನಿಯು ಖರೀದಿ ಮಾಡಲಿದೆ. ಈ ಖರೀದಿಯ ಬಗ್ಗೆ ತಿಲಕ್‌ನಗರ್‌ ಇಂಡಸ್ಟ್ರೀಸ್‌ ಕಂಪನಿಯು ಜುಲೈನಲ್ಲಿ ಮಾಹಿತಿ ನೀಡಿತ್ತು.

ಈ ಖರೀದಿಯಿಂದಾಗಿ ತಿಲಕ್‌ನಗರ್‌ ಕಂಪನಿಯು ದೇಶದಲ್ಲಿ ಬಹಳ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ವಿಸ್ಕಿ ಮಾರುಕಟ್ಟೆಯಲ್ಲಿ ಪ್ರಮುಖ ಕಂಪನಿಗಳ ಪೈಕಿ ಒಂದಾಗಲಿದೆ.

ADVERTISEMENT

ತಿಲಕ್‌ನಗರ್‌ ಕಂಪನಿಯು ಮ್ಯಾನ್ಷನ್‌ ಹೌಸ್‌ ಬ್ರ್ಯಾಂಡಿ, ಕೊರಿಯರ್ ನೆಪೋಲಿಯನ್ ಬ್ರ್ಯಾಂಡಿ, ಮ್ಯಾನ್ಷನ್ ಹೌಸ್ ಗೋಲ್ಡ್ ವಿಸ್ಕಿ, ಬ್ಲ್ಯೂ ಲಗೂನ್‌ ಜಿನ್‌ ಬ್ರ್ಯಾಂಡ್‌ಗಳ ಮಾಲೀಕತ್ವ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.