ನವದೆಹಲಿ: ಕಳಪೆ ಗುಣಮಟ್ಟದ ಪ್ರೆಷರ್ ಕುಕ್ಕರ್ ಮಾರಾಟ ಮಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ಫ್ಲಿಪ್‌ಕಾರ್ಟ್‌ಗೆ ₹ 1 ಲಕ್ಷ ದಂಡ ವಿಧಿಸಲಾಗಿದೆ ಎಂದು ಕೇಂದ್ರ ಗ್ರಾಹಕ ಹಿತರಕ್ಷಣಾ ಆಯೋಗವು (ಸಿಸಿಪಿಎ) ಹೇಳಿದೆ.
ತನ್ನ ಮೂಲಕ ಮಾರಾಟ ಮಾಡಲಾಗಿರುವ 598 ಪ್ರೆಷರ್ ಕುಕ್ಕರ್‌ಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಬೇಕು ಎಂದು ಫ್ಲಿಪ್‌ಕಾರ್ಟ್‌ಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಆ ಪ್ರೆಷರ್ ಕುಕ್ಕರ್‌ಗಳನ್ನು ಹಿಂದಕ್ಕೆ ಪಡೆದು ಅವುಗಳ ಹಣವನ್ನು ಮರಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಿಸಿಪಿಎ ಹೇಳಿದೆ.
ಸಿಸಿಪಿಎ ಅಧ್ಯಕ್ಷೆ ನಿಧಿ ಖಾರೆ ಅವರು ಈ ವಿಷಯವನ್ನು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಸೂಚನೆಗಳನ್ನು ಪಾಲಿಸಿರುವುದಕ್ಕೆ ಸಂಬಂಧಿಸಿದ ವರದಿಯನ್ನು ಸಲ್ಲಿಸುವಂತೆಯೂ ಹೇಳಲಾಗಿದೆ ಎಂದು ನಿಧಿ ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.