ADVERTISEMENT

ಶೀಘ್ರವೇ ಹೊಸ ಸಿಇಎ ನೇಮಕ

ಪಿಟಿಐ
Published 19 ಅಕ್ಟೋಬರ್ 2018, 17:17 IST
Last Updated 19 ಅಕ್ಟೋಬರ್ 2018, 17:17 IST

ನವದೆಹಲಿ: ಕೇಂದ್ರ ಸರ್ಕಾರ ಒಂದರಿಂದ ಎರಡು ತಿಂಗಳ ಒಳಗಾಗಿ ಹೊಸ ಮುಖ್ಯ ಆರ್ಥಿಕ ಸಲಹೆಗಾರರನ್ನು (ಸಿಇಎ) ನೇಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಕೇಂದ್ರ ಹಣಕಾಸು ಸಚಿವಾಲಯ ನೇಮಿಸಿರುವ ಶೋಧ ಕಮಿಟಿಯು ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರವೇ ಅಂತಿಗೊಳಿಸಲಿದೆ. ಹೀಗಾಗಿ ಎರಡು ತಿಂಗಳ ಒಳಗಾಗಿ ಹೊಸ ನೇಮಕಾತಿ ನಡೆಯಲಿದೆ ಎಂದು ಹೇಳಿವೆ.ಜೂನ್‌ 30ರಂದು ಹೊಸ ಅರ್ಜಿ ಆಹ್ವಾನಿಸಲಾಗಿತ್ತು.

ಅರವಿಂದ ಸುಬ್ರಮಣಿಯನ್‌ ಅವರು 2014ರ ಅಕ್ಟೋಬರ್ 16ರಂದು ಮೂರು ವರ್ಷಗಳ ಅವಧಿಗೆ ನೇಮಕವಾಗಿದ್ದರು. ಬಳಿಕ ಒಂದು ವರ್ಷ ವಿಸ್ತರಣೆ ನೀಡಲಾಗಿತ್ತು.

ADVERTISEMENT

ಗೂಗಲ್‌ ಇಂಡಿಯಾ ವರಮಾನ ವೃದ್ಧಿ

ಗೂಗಲ್‌ ಇಂಡಿಯಾ ಸಂಸ್ಥೆಯ ವರಮಾನ 2017–18ರಲ್ಲಿ ₹ 9,338 ಕೋಟಿಗೆ ತಲುಪಿದೆ.2016–17ರಲ್ಲಿದ್ದ ₹ 7,239 ಕೋಟಿಗೆ ಹೋಲಿಸಿದರೆಶೇ 29ರಷ್ಟು ವೃದ್ಧಿಯಾಗಿದೆ.ನಿವ್ವಳ ಲಾಭ₹ 306 ಕೋಟಿಯಿಂದ ₹ 407 ಕೋಟಿಗೆ ಶೇ 33ರಷ್ಟು ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.